ಬಾಗ್ದಾದಿ ಓರ್ವ ಹೇಡಿ, ನಾಯಿಯಂತೆ ಸತ್ತ: ಟ್ರಂಪ್ ವೀರಾವೇಶದ ನುಡಿ!
ಅಮೆರಿಕದ ವಿಶೇಷ ಪಡೆಗಳ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನಾಯಕ ಅಬೂಬಕರ್ ಅಲ್-ಬಾಗ್ದಾದಿ "ನಾಯಿ ಮತ್ತು ಹೇಡಿಗಳಂತೆ" ಸಾವನ್ನಪ್ಪಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವಾಷಿಂಗ್ಟನ್:ಅಮೆರಿಕದ ವಿಶೇಷ ಪಡೆಗಳ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನಾಯಕ ಅಬೂಬಕರ್ ಅಲ್-ಬಾಗ್ದಾದಿ "ನಾಯಿ ಮತ್ತು ಹೇಡಿಗಳಂತೆ" ಸಾವನ್ನಪ್ಪಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಯೋತ್ಪಾದಕ ನಾಯಕ ತನ್ನ ಮೂವರು ಮಕ್ಕಳನ್ನು ಸೇರಿಕೊಂಡು ಆತ್ಮಾಹುತಿ ಬಾಂ ಗೆ ಬಲಿಯಾಗಿದ್ದಾನೆ ಅಮೆರಿಕಾ ಸೇನೆ ದಾಳಿಯ ವೇಳೆ ತಾನೇ ಆತ್ಮಾಹುತಿ ದಾಳಿ ನಡೆಸಿಕೊಂಡು ಬಾಗ್ದಾದಿ ಸಾವಿಗೆ ಶರಣಾಗಿದ್ದಾನೆ.
ವಾಯುವ್ಯ ಸಿರಿಯಾದಲ್ಲಿ ನಡೆದ ಮಾರಕ ದಾಳಿಯ ವೇಳೆ ವಿಶ್ವದ ನಂಬರ್ ಒನ್ ಭಯೋತ್ಪಾದಕ" ಅಂತ್ಯವಾಗಿದ್ದಾನೆ ಎಂದು ಟ್ರಂಪ್ ಘೋಷಿಸಿದರು
"ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರ ನಾಯಕ ಬಾಗ್ದಾದಿಯನ್ನ ನಮ್ಮ ಸೈನಿಕರು ಹತ್ಯೆ ಮಾಡಿದ್ದಾರೆ ಎಂದು ಖಚಿತಪಡಿಸಿದ್ದಾರೆ" ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಇದಕ್ಕೆ ಹಿಂದೆ ಅಮೆರಿಕಾ ಅಧ್ಯಕ್ಷರು ಮಾಡಿದ್ದ ಟ್ವೀಟ್ ನಲ್ಲಿ ತುಂಬಾ ದೊಡ್ಡದಾದ ಏನೋ ಒಂದು ಸಂಭವಿಸಿದೆ" ಎಂದು ಉಲ್ಲೇಖಿಸಿದ್ದರು. ಟ್ವೀಟ್ ನಂತರ, ಟ್ರಂಪ್ ಭಾನುವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ) ಪ್ರಮುಖ ಘೋಷಣೆ ಮಾಡಲಿದ್ದಾರೆ ಎಂದು ಶ್ವೇತಭವನ ಘೋಷಿಸಿತ್ತು.
ಇದ್ಲಿಬ್ ಪ್ರಾಂತ್ಯದ ಬಾಗ್ದಾದಿ ಅಡಗುತಾಣಗಳ ವಿರುದ್ಧ ಯುಎಸ್ ವಿಶೇಷ ಕಾರ್ಯಾಚರಣೆ ಕಮಾಂಡೋಗಳು ಶನಿವಾರ ವಾಯುವ್ಯ ಸಿರಿಯಾದಲ್ಲಿ ಮಾರಕ ದಾಳಿ ನಡೆಸಿದ್ದವು. ಇನ್ನು ಡಿಎನ್‌ಎ ಮತ್ತು ಬಯೋಮೆಟ್ರಿಕ್ ಪರೀಕ್ಷೆಗಳನ್ನು ನಡೆಸಿದ ನಂತರವೇ ಐಎಸ್ ಭಯೋತ್ಪಾದಕನ ಸಾವಿನ ಬಗ್ಗೆ ಅಂತಿಮ ದಾಖಲೆಗಳು ಸಿಗಲಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಐಎಸ್ ಅತ್ಯಂತ ಕುಖ್ಯಾತ ನಾಯಕ ಬಾಗ್ದಾದಿ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ.ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಯುಎಸ್ ಮಿಲಿಟರಿ ನಡೆಸಿದ ದಾಳಿಯ ಸಮಯದಲ್ಲಿ ಬಾಗ್ದಾದಿ ಉಗ್ರನೆಲೆಯನ್ನು ಸ್ಫೋಟಿಸಲಾಗಿದೆ ಎಂದು ಹೇಳಲಾಗಿದೆ. ಕಳೆದ ಏಪ್ರಿಲ್ ನಲ್ಲಿ ಶ್ರೀಲಂಕಾ ದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕ ಬಾಗ್ದಾಫ಼್ದಿ ಪ್ರಚಾರದ ವೀಡಿಯೊವೊಂದರಲ್ಲಿ ಕಾಣಿಸಿಕೊಂಡಿದ್ದ. ಆ ಬಾಂಬ್ ದಾಳಿಯಲ್ಲಿ ಸುಮಾರು 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.ಉಗ್ರ ನಾಯಕ ಕಡೆಯ ಬಾರಿಗೆ 2014 ರಲ್ಲಿ ಮೊಸುಲ್‌ನ ಗ್ರೇಟ್ ಮಸೀದಿಯಲ್ಲಿ ನಡೆದ ಧರ್ಮೋಪದೇಶದ ಸಂದರ್ಭದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


