ಉಗ್ರ ಹಫೀಜ್ ಸಯೀದ್ ಕುರಿತ ಪಾಕಿಸ್ತಾನದ ಮನವಿಗೆ ವಿಶ್ವಸಂಸ್ಥೆ ಅನುಮೋದನೆ
ಜಾಗತಿಕ ಮಟ್ಟದ ಭಯೋತ್ಪಾದಕ ಹಫೀಜ್ ಸಯೀದ್ ಪರವಾಗಿ ಪಾಕಿಸ್ತಾನ ಸಲ್ಲಿಸಿದ್ದ ಮನವಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದನೆ ನೀಡಿದೆ.

ಜಾಗತಿಕ ಮಟ್ಟದ ಭಯೋತ್ಪಾದಕ ಹಫೀಜ್ ಸಯೀದ್ ಪರವಾಗಿ ಪಾಕಿಸ್ತಾನ ಸಲ್ಲಿಸಿದ್ದ ಮನವಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದನೆ ನೀಡಿದೆ.
ಹಫೀಜ್ ಸಯೀದ್ ಕುಟುಂಬ ನಿರ್ವಹಣೆಗಾಗಿ ಬ್ಯಾಂಕ್ ಖಾತೆ ಉಪಯೋಗಿಸುವುದಕ್ಕಾಗಿ ಆತನಿಗೆ ಅನುಮತಿ ನೀಡಬೇಕೆಂದು ಭದ್ರತಾ ಮಂಡಳಿಯ 1267 ಸಮಿತಿಗೆ ಪಾಕಿಸ್ತಾನ ಮನವಿ ಮಾಡಿತ್ತು. ಈ ಮನವಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದಿಸಿದೆ.
ಮುಂಬೈ ದಾಳಿಯ ಉಗ್ರ ಹಫೀಜ್ ಸಯೀದ್ ಗೆ ಸಹಕಾರ ನೀಡುವ ಪಾಕಿಸ್ತನಾದ ನಡೆ ಇದಾಗಿದ್ದು, ಪಾಕಿಸ್ತಾನದ ಮನವಿಗೆ ವಿಶ್ವಸಂಸ್ಥೆ ಒಪ್ಪಿಗೆ ಸೂಚಿಸಿದೆ.
ಪಾಕಿಸ್ತನದ ಮನವಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ನೀಡಲಾಗಿದ್ದ ಅವಧಿಯಲ್ಲಿ ಯಾವುದೇ ಸದಸ್ಯ ರಾಷ್ಟ್ರಗಳು ಆಕ್ಷೇಪಣೆ ಸಲ್ಲಿಸದೇ ಇದ್ದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹಫೀಜ್ ಸಯೀದ್ ಕುಟುಂಬ ನಿರ್ವಹಣೆಗಾಗಿ ಬ್ಯಾಂಕ್ ಖಾತೆ ಉಪಯೋಗಿಸುವುದಕ್ಕಾಗಿ ಅನುಮತಿ ನೀಡಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ 1267 ರ ಪ್ರಕಾರ ಈ ವರೆಗೂ ಹಫೀಜ್ ಸಯೀದ್ ನ ಬ್ಯಾಂಕ್ ಖಾತೆಗಳನ್ನು ಪಾಕಿಸ್ತಾನ ಸರ್ಕಾರ ನಿಷ್ಕ್ರಿಯಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


