'ಬ್ಯಾಡ್ ಫಾಲ್': ವ್ಯಕ್ತಿಯ ಜೀವ ಉಳಿಸಿದ ಆ್ಯಪಲ್ ಸ್ಮಾರ್ಟ್ ವಾಚ್!
ಡಿಜಿಟಲ್ ಗ್ಯಾಜೆಟ್ ಗಳನ್ನು ಶೋಕಿಗಾಳಿ ಬಳಸುತ್ತಾರೆ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಇಂತಹ ಡಿಜಿಟಲ್ ಗ್ಯಾಜೆಟ್ ವೊಂದು ವ್ಯಕ್ತಿಯ ಜೀವ ಉಳಿಸಿದೆ.

ಅಪಘಾತಕ್ಕೀಡಾಗಿ ಸಾವುನೋವಿನ ನಡುವೆ ಇದ್ದ ವ್ಯಕ್ತಿಯ ಕುಟುಂಬಕ್ಕೆ ತುರ್ತು ಸಂದೇಶ ರವಾನಿಸಿದ್ದ ಸ್ಮಾರ್ಟ್ ವಾಚ್
ವಾಷಿಂಗ್ಟನ್: ಡಿಜಿಟಲ್ ಗ್ಯಾಜೆಟ್ ಗಳನ್ನು ಶೋಕಿಗಾಳಿ ಬಳಸುತ್ತಾರೆ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಇಂತಹ ಡಿಜಿಟಲ್ ಗ್ಯಾಜೆಟ್ ವೊಂದು ವ್ಯಕ್ತಿಯ ಜೀವ ಉಳಿಸಿದೆ.
ಹೌದು.. ವ್ಯಕ್ತಿಯೋರ್ವ ಅಪಘಾತಕ್ಕೀಡಾಗಿದ್ದ ಸಂದರ್ಭದಲ್ಲಿ ಆತ ಧರಿಸಿದ್ದ ಸ್ಮಾರ್ಟ್ ವಾಚ್ ಆತನ ಕುಟುಂಬಕ್ಕೆ ವಿಚಾರ ತಿಳಿಸಿ, ಸೂಕ್ತ ಸಂದರ್ಭದಲ್ಲಿ ಆತನಿಗೆ ಚಿಕಿತ್ಸೆ ಲಭಿಸುವಂತೆ ಮಾಡಿದೆ. ಆ ಮೂಲಕ ಆತನ ಜೀವ ಉಳಿಸುವಲ್ಲಿ ಸ್ಮಾರ್ಟ್ ವಾಚ್ ನೆರವಾಗಿದೆ.
ಇದು ಅಮೆರಿಕದ ವಾಷಿಂಗ್ಟನ್ ನಿಂದ ವರದಿಯಾಗಿದ್ದು, ಬೈಕಿಂಗ್ ಗೆ ಹೋಗಿದ್ದ ಬೈಕರ್ ಬಾಬಿಯೋ ಮಾರ್ಗ ಮಧ್ಯ ಅಪಘಾತಕ್ಕೀಡಾಗಿದ್ದರು. ರಿವರ್ ಸೈಡ್ ಪಾಕ್ ಬಳಿ ಬಾಬಿಯೋ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಬರ್ಡೆಟ್ ಧರಿಸಿದ್ದ ಆ್ಯಪಲ್ ಸ್ಮಾರ್ಟ್ ವಾಚ್ ಗೂ ಹಾನಿಯಾಗಿತ್ತು. ಕೂಡಲೇ ವಾಚ್ ಆತನ ಕುಟುಂಬಕ್ಕೆ ತುರ್ತು ಸಂದೇಶ ರವಾನಿಸಿದ್ದು ಮಾತ್ರವಲ್ಲದೇ, ಆತ ಇರುವ ಲೊಕೇಷನ್ ಅನ್ನು ಕೂಡ ತೋರಿಸಿದೆ. ವಾಚ್ ತೋರಿಸಿದ ಲೋಕೇಷನ್ ಜಾಡನ್ನು ಹಿಡಿದ ಕುಟುಂಬಸ್ಥರು ಕೂಡಲೇ ಬರ್ಡೆಟ್ ಇದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಆ್ಯಂಬುಲೆನ್ಸ್ ಮೂಲಕ ಬೊಬಿಯೋರನ್ನು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.
ವಾಚ್ ಬೋಬಿಯೋ ಕುಟುಂಬಸ್ಥರಿಗೆ ಮಾತ್ರವಲ್ಲದೇ ಆ್ಯಂಬುಲೆನ್ಸ್ ಕೂ ಸಂದೇಶ ರವಾನಿಸಿರುತ್ತದೆ. ಹೀಗಾಗಿ ಕೂಡಲೇ ಸ್ಥಳಕ್ಕಾಗಿಮಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬರ್ಡೆಟ್ ರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ತುರ್ತು ಚಿಕಿತ್ಸೆ ಬಳಿಕ ಬಾಬಿಯೋ ಗುಣಮುಖರಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಚಾರವನ್ನು ಸ್ವತಃ ಬಾಬಿಯೋ ಪುತ್ರ ಬರ್ಡೆಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ಸುದ್ದಿ ವ್ಯಾಪಕ ವೈರಲ್ ಆಗಿದೆ.
ಆಗಿದ್ದೇನು?
ಬೈಕಿಂಗ್ ಟ್ರಿಪ್ಗಾಗಿ ತೆರಳಿದ್ದ ಗೇಬ್ ಬರ್ಡೆಟ್ರ ತಂದೆ ಬೋಬಿಯೋರ ಬೈಕ್ ಅಪಘಾತಗೀಡಾಗಿತ್ತು. ಈ ವೇಳೆ ಕೈಲಿದ್ದ ಆ್ಯಪಲ್ ವಾಚ್ಗೆ ಹಾನಿಯಾದ ಹಿನ್ನೆಲೆ ವಾಚ್ ತಕ್ಷಣ ಬೋಬಿಯೋ ಕುಟುಂಬಸ್ಥರಿಗೆ ತುರ್ತು ಸಂದೇಶ ರವಾನಿಸಿದೆ. ಬೋಬಿಯೋ ನೆಲಕ್ಕೆ ಬೀಳುತ್ತಿದ್ದಂತೆ ಬಲವಾಗಿ ಕೆಳಗೆ ಬಿದ್ದಿರುವ ಸೂಚನೆ ನೀಡಿ ಆ್ಯಪಲ್ ವಾಚ್ ಬರ್ಡೆಟ್ಗೆ ಮೆಸೇಜ್ ಕಳುಹಿಸಿದೆ. ತಕ್ಷಣ ವಾಚ್ ನೀಡಿದ್ದ ಲೊಕೇಷನ್ ಜಾಡು ಹಿಡಿದು ಹೊರಡಲು ಸಿದ್ದರಾಗ್ತಾರೆ. ಅಲ್ಲದೆ ವಾಚ್ ತಾನಾಗಿಯೇ ಆ್ಯಂಬುಲೆನ್ಸ್ ಸರ್ವಿಸ್ಗೂ ಕೂಡ ಕರೆ ಮಾಡಿ ಲೊಕೇಷನ್ ಶೇರ್ ಮಾಡುತ್ತೆ. ಹೀಗಾಗಿ ಮಗ ಬರ್ಡೆಟ್ ಆ್ಯಕ್ಸಿಡೆಂಟ್ ಆಗಿದ್ದ ಸ್ಥಳ ತಲುಪುವ ಹೊತ್ತಿಗೆ ತಂದೆ ಬೋಬಿಯೋ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಇದಕ್ಕೂ ಮೊದಲು ವಾಚ್ನಲ್ಲಿ ತುರ್ತು ಪರಿಸ್ಥಿತಿಯ ವೇಳೆ ಸಂಪರ್ಕಿಸಬೇಕಾದ ನಂಬರ್ನಲ್ಲಿ ಮಗನ ನಂಬರ್ ದಾಖಲಿಸಿದ್ದರು. ಹೀಗಾಗಿ ತಂದೆ ಅಪಾಯದಲ್ಲಿದ್ದಾಗ ಆ್ಯಪಲ್ ವಾಚ್ ಮಗನಿಗೆ ಲೊಕೇಷನ್ ಜೊತೆಗೆ ಮೆಸೇಜ್ ಕಳುಹಿಸಿದೆ. ಆ್ಯಪಲ್ನಿಂದಾಗಿ ತಂದೆಯ ಜೀವ ಉಳಿದಿದೆ ಅಂತ ಬರ್ಡೆಟ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು. ಆ್ಯಪಲ್ ವಾಚ್ನಿಂದ ತಮಗಾದ ಸಹಾಯ ನೆನೆದು ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


