ಚಾಕೊಲೇಟ್ ಕೊಡ್ತಿಲ್ಲ ಅಂತ ಡಿವೋರ್ಸ್ ಗೆ ಮುಂದಾದ ಮಹಿಳೆ!
ಚಾಕೊಲೇಟ್ ಅನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಪತ್ನಿಯೊಬ್ಬಳು ವಿಚ್ಛೇದನದತ್ತ ಮುಖ ಮಾಡಿರುವ ಕುರಿತು ವರದಿಯಾಗಿದೆ.

ಚಾಕೊಲೇಟ್ ಇರುವ ಫ್ರಿಡ್ಜ್ ಗೆ ಬೀಗ ಹಾಕಿದ ಪತಿ ಮಹಾಶಯ, ಫೇಸ್ ಬುಕ್ ನಲ್ಲಿ ಪತ್ನಿಯ ಅಳಲು
ನವದೆಹಲಿ: ಚಾಕೊಲೇಟ್ ಅನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಪತ್ನಿಯೊಬ್ಬಳು ವಿಚ್ಛೇದನದತ್ತ ಮುಖ ಮಾಡಿರುವ ಕುರಿತು ವರದಿಯಾಗಿದೆ.
ಆಧುನಿಕ ಜೀವನ ಶೈಲಿಯಲ್ಲಿ ದಂಪತಿಗಳು ಕ್ಷುಲ್ಲಕ ವಿಚಾರಕ್ಕೆಲ್ಲಾ ಜಗಳ ಮಾಡಿಕೊಂಡು ವಿಚ್ಛೇದನ ಪಡೆಯುತ್ತಿದ್ದಾರೆ. ಇದಕ್ಕೆ ನೂತನ ಸೇರ್ಪಡೆಯೊಂದು ಇಲ್ಲಿದ್ದು, ಪತಿ ತನಗೆ ಚಾಕೊಲೇಟ್ ನೀಡುತ್ತಿಲ್ಲ ಎಂದು ಆರೋಪಿಸಿ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಅಲ್ಲದೆ ತನ್ನ ಪತಿಯ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ. ಆಕೆ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.
ಸ್ಟೇಸಿ ಲೋವೆ ಎಂಬ ಫೇಸ್ ಬುಕ್ ಖಾತೆದಾರರು ಈ ಪೋಸ್ಟ್ ಹಾಕಿದ್ದು, ಚಾಕೊಲೇಟ್ ಪ್ರಿಯ ತನ್ನ ಪತಿ ಚಾಕಲೇಟ್ ಇರುವ ಬಾಕ್ಸ್ ಗೆ ಲಾಕ್ ಹಾಕಿದ್ದಾರೆ. ಆ ಚಾಕೊಲೇಟ್ಅನ್ನು ನಾನು ತಿನ್ನಬಾರದು ಎಂದು. ಇಂತಹ ಹೀನ ಮನಸ್ಥಿತಿಯ ವ್ಯಕ್ತಿಯೊಂದಿಗೆ ಬಾಳಬೇಕೇ.. ಇದು ವಿಚ್ಛೇದನದ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಬರೆದುಕೊಂಡಿದ್ದಾರೆ.
ಚಾಕೋಲೆಟ್ ಇರುವ ಫ್ರಿಜ್ನ ಒಂದು ಭಾಗಕ್ಕೆ ಸೆಕ್ಯೂರಿಟಿ ಲಾಕ್ ಅಳವಡಿಸಿರುವ ತನ್ನ ಭಾವಿ ಪತಿಯ ನಡೆಯಿಂದ ಬೇಸರಗೊಂಡ ಲೊವೆ, 'ನೀವು ಒಟ್ಟಿಗೆ ಮನೆಯನ್ನು ಖರೀದಿಸುತ್ತೀರಾ, ಮಗುವನ್ನು ಒಟ್ಟಿಗೆ ಬಯಸುತ್ತೀರಾ, ನಿಶ್ಚಿತಾರ್ಥದಿಂದ ಹಿಡಿದು ಮದುವೆಯ ಯೋಜನೆ ಮತ್ತು ಮನೆ ಮಾಡುವವರೆಗೂ ಎಲ್ಲವೂ ಒಟ್ಟಿಗೆ ಬೇಕು. ಆದರೆ, ಡೇವ್ ಮಾತ್ರ ಹೊರ ಹೋಗಿ ಚಾಕೋಲೆಟ್ ಕೊಂಡು ಬಂದು ತಮ್ಮ ಫ್ರಿಜ್ನಲ್ಲಿ ಸೇಫ್ ಆಗಿ ಸೆಕ್ಯೂರಿಟಿ ಲಾಕ್ನಲ್ಲಿ ಇಡುತ್ತಾರೆ. ಇವನೊಬ್ಬ ಮೂರ್ಖ, ಇನ್ನು ಮುಂದೆ ನನ್ನೊಂದಿಗೆ ಶೇರ್ ಮಾಡಿಕೊಳ್ಳುವುದಿಲ್ಲವಂತೆ. ಇಂತಹವನನ್ನು ಯಾರಾದರೂ ಬಯಸುತ್ತಾರೆಯೇ? ನಿಜವಾಗಿಯೂ ಇದು ಮುರಿದುಕೊಳ್ಳುವಂತಹ ಸಂಬಂಧವಲ್ಲವೇ? ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಫ್ರಿಡ್ಜ್ ನಲ್ಲಿ ಇಡಬಹುದಾದ ಲಾಕರ್ ಗಳ ಆನ್ ಲೈನ್ ಖರೀದಿ ಲಿಂಕ್ ಅನ್ನು ಕೂಡ ಶೇರ್ ಮಾಡಿದ್ದಾರೆ. ಸೆಪ್ಟೆಂಬರ್ 12 ರಂದು ಈ ಪೋಸ್ಟ್ ಮಾಡಲಾಗಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಈವರೆಗೂ 60,000 ಬಾರಿ ಶೇರ್ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


