ವಿದೇಶ

ದೇವ ನಿಂದನೆ ಆರೋಪ: ಹಿಂದೂ ದೇವಾಲಯ, ಮನೆಗಳ ಮೇಲೆ ದಾಳಿ! 

ದೇವ ನಿಂದನೆ ಆರೋಪದ ಪರಿಣಾಮ ಹಿಂದೂ ದೇವಾಲಯಗಳು, ಮನೆಗಳ ಮೇಲೆ ದಾಳಿ ನಡೆದಿದೆ.

ದೇವ ನಿಂದನೆ ಆರೋಪ: ಹಿಂದೂ ದೇವಾಲಯ, ಮನೆಗಳ ಮೇಲೆ ದಾಳಿ! 
ದೇವ ನಿಂದನೆ ಆರೋಪ: ಹಿಂದೂ ದೇವಾಲಯ, ಮನೆಗಳ ಮೇಲೆ ದಾಳಿ!
Published On :

ಇಸ್ಲಾಮಾಬಾದ್: ದೇವ ನಿಂದನೆ ಆರೋಪದ ಪರಿಣಾಮ ಹಿಂದೂ ದೇವಾಲಯಗಳು, ಮನೆಗಳ ಮೇಲೆ ದಾಳಿ ನಡೆದಿದೆ. 

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಟೌನ್ ನಲ್ಲಿ ಹಿಂದೂ ಸಮುದಾಯದ ಮನೆಗಳು, ದೇವಾಲಯಗಳ ಮೇಲೆ ದಾಳಿ ನಡೆದಿವೆ. ಹಿಂದೂ ಸಮುದಾಯದವರಾದ ಶಾಲಾ ಪ್ರಾಂಶುಪಾಲರು ದೇವ ನಿಂದನೆ ಮಾಡಿದ್ದಾರೆಂಬ ಆರೋಪದ ಪರಿಣಾಮ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಪಾಕಿಸ್ತಾನದ ಹಿಂದೂ ಹಕ್ಕುಗಳ ಆಯೋಗ ಮಾಹಿತಿ ಪಡೆದಿದ್ದು, ಗುಂಪು ಹಲ್ಲೆ ಬಗ್ಗೆ ಆಯೋಗ ಆತಂಕ ವ್ಯಕ್ತಪಡಿಸಿದೆ. 

ವರ್ಲ್ಡ್ ಸಿಂಧಿ ಕಾಂಗ್ರೆಸ್ ಸಹ ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಧಾರ್ಮಿಕ ಅಲ್ಪಸಂಖ್ಯಾತರಿಗೆ ಭದ್ರತೆ ಒದಗಿಸುವಂತೆ ಪಾಕಿಸ್ತಾನಕ್ಕೆ ಹೇಳಬೇಕೆಂದು ವಿಶ್ವಸಮುದಾಯವನ್ನು ಒತ್ತಾಯಿಸಿದೆ. ಪಾಕಿಸ್ತಾನ ಪೊಲೀಸರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪರಿಸ್ಥಿತಿಯ ನಿಯಂತ್ರಣದಲ್ಲಿದೆ. ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.