ವಿದೇಶ

ಬೆಲ್ಲಿ ಡ್ಯಾನ್ಸ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಹೋಗಿ ಮುಜುಗರಕ್ಕೀಡಾದ ಪಾಕ್! ವಿಡಿಯೋ

ತೀವ್ರ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ, ಬೆಲ್ಲಿ ಡ್ಯಾನ್ಸ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಹೋಗಿ ವಿಶ್ವದ ಮುಂದೆ ಮತ್ತೆ ಮುಜುಗರಕ್ಕೀಡಾಗಿದೆ.

ಬೆಲ್ಲಿ ಡ್ಯಾನ್ಸ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಹೋಗಿ ಮುಜುಗರಕ್ಕೀಡಾದ ಪಾಕ್! ವಿಡಿಯೋ
ಬೆಲ್ಲಿ ಡ್ಯಾನ್ಸ್
Published On :

ಇಸ್ಲಾಮಾಬಾದ್ : ತೀವ್ರ ಹದಗೆಟ್ಟ  ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ, ಬೆಲ್ಲಿ ಡ್ಯಾನ್ಸ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಹೋಗಿ ವಿಶ್ವದ ಮುಂದೆ ಮತ್ತೆ ಮುಜುಗರಕ್ಕೀಡಾಗಿದೆ.

ಅಜೆರ್ಬೈಜಾನ್ ರಾಜಧಾನಿ ಬಾಕುನಲ್ಲಿ ಸೆಪ್ಟೆಂಬರ್ 4ರಿಂದ 8ರವರೆಗೂ ಎಸ್ ಸಿಸಿಐ ಆಯೋಜಿಸಿದ್ದ ಹೂಡಿಕೆದಾರರ ಸಮಾವೇಶದಲ್ಲಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸ್ ಮಾಡಿಸಲಾಗಿದೆ.

ಬೆಲ್ಲಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟರ್ ಬಳಕೆದಾರರಿಂದ ಮಂಗಳಾರತಿ ಹಾಕಲಾಗುತ್ತಿದೆ.ಇದು ನವ ಪಾಕಿಸ್ತಾನದ ಹಾದಿ ಎಂದು ಕೆಲ ಪಾಕಿಸ್ತಾನ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗಿದೆ. 

ಭಾರತ ಚಂದ್ರಯಾನ ಕೈಗೊಂಡಿದ್ದರೆ ಪಾಕಿಸ್ತಾನ ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸ್ ಆಯೋಜಿಸುತ್ತಿದೆ ಎಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.