ವಿದೇಶ

ಸರಳತೆಗೊಂದು ಉದಾಹರಣೆ: ಸೋಫಾ ನಿರಾಕರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತ ಪ್ರಧಾನಿ ಮೋದಿ

ರಷ್ಯಾದ ವ್ಲಾಡಿವೋಸ್ಟಾಕ್'ನಲ್ಲಿ ನಡೆದ ಫೋಟೋ ಸೆಷನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದುಬಾರಿ ಸೋಫಾವನ್ನು ನಿರಾಕರಿಸಿ, ಕುರ್ಚಿಯಲ್ಲಿ ಕುಳಿತುಕೊಂಡು ಸರಳತೆಗೆ ಉದಾಹರಣೆಯಾಗಿದ್ದಾರೆ.

ಸರಳತೆಗೊಂದು ಉದಾಹರಣೆ: ಸೋಫಾ ನಿರಾಕರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತ ಪ್ರಧಾನಿ ಮೋದಿ
ಫೋಟೋ ಸೆಷನ್'ನಲ್ಲಿ ಸೋಫಾ ನಿರಾಕರಿಸಿ ಕುರ್ಚಿಯಲ್ಲಿ ಕುಳಿತ ಮೋದಿ
Published On :

ಸರಳತೆಗೆ ಉದಾಹರಣೆಯಾದ ಮೋದಿ: ಫೋಟೋ ಸೆಷನ್'ನಲ್ಲಿ ಸೋಫಾ ನಿರಾಕರಿಸಿ ಕುರ್ಚಿಯಲ್ಲಿ ಕುಳಿತ ಪ್ರಧಾನಿ

ವ್ಲಾಡಿವೋಸ್ಟಾಕ್: ರಷ್ಯಾದ ವ್ಲಾಡಿವೋಸ್ಟಾಕ್'ನಲ್ಲಿ  ನಡೆದ ಫೋಟೋ ಸೆಷನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದುಬಾರಿ ಸೋಫಾವನ್ನು ನಿರಾಕರಿಸಿ, ಕುರ್ಚಿಯಲ್ಲಿ ಕುಳಿತುಕೊಂಡು ಸರಳತೆಗೆ ಉದಾಹರಣೆಯಾಗಿದ್ದಾರೆ. 

ಫೋಟೋ ಸೆಷನ್ ನಲ್ಲಿ ಪ್ರಧಾನಿ ಮೋದಿಯವರು ದುಬಾರಿಯಾದ ಹಾಗೂ ವಿಶಾಲವಾದ ಸೋಫಾವನ್ನು ನಿರಾಕರಿಸಿ. ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಇದನ್ನು ಕಂಡ ಇತರೆ ಅಧಿಕಾರಿಗಳು ತಾವೂ ಕೂಡ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. 

ಮೋದಿಯವರ ಈ ಸರಳತೆಯ ಮನಸ್ಥಿತಿಯನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆ ಟ್ವಿಟರ್ ನಲ್ಲಿ ಹೆಂಚಿಕೊಂಡಿದ್ದಾರೆ. 

ಮೋದಿಯವರು ಸರಳೆಯ ಉದಾಹರಣೆಯನ್ನು ಇಂದು ಮತ್ತೆ ಕಾಣಬಹುದು. ರಷ್ಯಾದಲ್ಲಿ ತಮಗಾಗಿ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ಆಸನವನ್ನು ನಿರಾಕರಿಸಿ, ಇತರರೊಂದಿಗೆ ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆಂದು ಗೋಯಲ್ ಟ್ವೀಟ್ ಮಾಡಿದ್ದಾರೆ. 

ಮೋದಿಯವರ ಸರಳತೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೋದಿಯವರ ಸರಳತೆಯನ್ನು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.