ವಿದೇಶ

ಗ್ರೇಟ್ ನ್ಯೂ ಬ್ರೆಕ್ಸಿಟ್ ಡೀಲ್ ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್-ಇಯು ಒಪ್ಪಿಗೆ

ಬ್ರಿಟನ್ ಹಾಗೂ ಯುರೋಪಿಯನ್ ಯೂನಿಯನ್ ಗ್ರೇಟ್ ನ್ಯೂ ಬ್ರೆಕ್ಸಿಟ್ ಡೀಲ್ ಗೆ ಒಪ್ಪಿಗೆ ಸೂಚಿಸಿರುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅ.17 ರಂದು ಘೋಷಿಸಿದ್ದಾರೆ.

ಗ್ರೇಟ್ ನ್ಯೂ ಬ್ರೆಕ್ಸಿಟ್ ಡೀಲ್ ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್-ಇಯು ಒಪ್ಪಿಗೆ
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
Published On :

ಲಂಡನ್: ಬ್ರಿಟನ್ ಹಾಗೂ ಯುರೋಪಿಯನ್ ಯೂನಿಯನ್ ಗ್ರೇಟ್ ನ್ಯೂ ಬ್ರೆಕ್ಸಿಟ್ ಡೀಲ್ ಗೆ ಒಪ್ಪಿಗೆ ಸೂಚಿಸಿರುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅ.17 ರಂದು ಘೋಷಿಸಿದ್ದಾರೆ. 

ಟ್ವಿಟರ್ ನಲ್ಲಿ ಈ ಬಗ್ಗೆ ಬ್ರಿಟನ್ ಪ್ರಧಾನಿ ಅಧಿಕೃತ ಘೋಷಣೆ ಮಾಡಿದ್ದು, ವಾರಾಂತ್ಯದಲ್ಲಿ ನ್ಯೂ ಬ್ರೆಕ್ಸಿಟ್ ಡೀಲ್ ನ್ನು ಸಂಸತ್ ನಲ್ಲಿ ಅನುಮೋದಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. 
  
ಶನಿವಾರದ ವೇಳೆಗೆ ಬ್ರಿಟನ್ ಸಂಸತ್ ಬ್ರೆಕ್ಸಿಟ್ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಆ ಬಳಿಕ ಎನ್ ಹೆಚ್ಎಸ್, ಪರಿಸರ ಸೇರಿದಂತೆ ನಮ್ಮ ಮುಂದಿನ ಆದ್ಯತೆಗಳತ್ತ ಗಮನಹರಿಸಬಹುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. 

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.