ವಿದೇಶ

ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕಿಸ್ತಾನ ಪ್ರಗತಿ ಸಾಧಿಸಿದೆ: ಎಫ್ಎಟಿಎಫ್ 

ಪಾಕಿಸ್ತಾನ ಹಲವು ಕ್ಷೇತ್ರಗಳಲ್ಲಿ ತೆಗೆದುಕೊಂಡಿರುವ ಕ್ರಮಗಳು ತೃಪ್ತಿ ತಂದಿದೆ ಎಂದು ಹಣಕಾಸು ಕಾರ್ಯಪಡೆ(ಎಫ್ಎಟಿಎಫ್) ಹೇಳಿದೆ.

ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕಿಸ್ತಾನ ಪ್ರಗತಿ ಸಾಧಿಸಿದೆ: ಎಫ್ಎಟಿಎಫ್ 
ಇಮ್ರಾನ್ ಖಾನ್
Published On :

ಪ್ಯಾರಿಸ್: ಪಾಕಿಸ್ತಾನ ಹಲವು ಕ್ಷೇತ್ರಗಳಲ್ಲಿ ತೆಗೆದುಕೊಂಡಿರುವ ಕ್ರಮಗಳು ತೃಪ್ತಿ ತಂದಿದೆ ಎಂದು ಹಣಕಾಸು ಕಾರ್ಯಪಡೆ(ಎಫ್ಎಟಿಎಫ್) ಹೇಳಿದೆ.


ಆರ್ಥಿಕ ವ್ಯವಹಾರಗಳ ಸಚಿವ ಹಮ್ಮದ್ ಅಜರ್ ನೇತೃತ್ವದ ಪಾಕಿಸ್ತಾನ ನಿಯೋಗ ಎಫ್ಎಟಿಎಫ್ ಸಭೆಯಲ್ಲಿ, ಪಾಕಿಸ್ತಾನ 27 ವಿಷಯಗಳಲ್ಲಿ 20 ವಿಷಯಗಳಲ್ಲಿ ಪ್ರಗತಿ ತೋರಿಸಿದೆ ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.


ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ ಚೀನಾ, ಟರ್ಕಿ ಮತ್ತು ಮಲೇಷಿಯಾ ದೇಶಗಳು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಎಫ್ಎಟಿಎಫ್ ಸಭೆ ಮೊನ್ನೆ ಅಕ್ಟೋಬರ್ 14ರಂದು ಆರಂಭವಾಗಿದ್ದು ಪಾಕಿಸ್ತಾನ ಕಳೆದ ಏಪ್ರಿಲ್ ವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನೀಡಿರುವ ವರದಿ ಬಗ್ಗೆ ಚರ್ಚೆ ನಡೆಸಲಿದೆ. ಅಂತರ ಸರ್ಕಾರ ಸಂಘಟನೆಗಳ ಬೂದು ಪಟ್ಟಿಯಿಂದ ಪಾಕಿಸ್ತಾನವನ್ನು ಹೊರಗಿಡುವುದೇ ಬೇಡವೇ ಎಂಬ ಬಗ್ಗೆ ನಿರ್ಧಾರಕ್ಕೆ ಬರಲಿದೆ.


ಈ ತಿಂಗಳ ಆರಂಭದಲ್ಲಿ ಅಕ್ರಮ ಹಣ ವರ್ಗಾವಣೆಯ ಏಷ್ಯಾ ಫೆಸಿಫಿಕ್ ಗುಂಪು ವರದಿಯೊಂದನ್ನು ಪ್ರಕಟಿಸಿ ಅದರಲ್ಲಿ ಪಾಕಿಸ್ತಾನ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಹಣ ಪೂರೈಕೆ ಮಾಡುತ್ತಿದೆ ಎಂದು ವರದಿಯೊಂದನ್ನು ಪ್ರಕಟಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.