ವಿದೇಶ

ಪಾಕಿಸ್ತಾನದ ರಕ್ತದಲ್ಲಿಯೇ ಕಾಶ್ಮೀರವಿದೆ: ಹೇಳಿಕೆ ಮೂಲಕ ರಾಜಕೀಯ ಸಕ್ರಿಯ ಘೋಷಿಸಿದ ಮುಷರಫ್

ಪಾಕಿಸ್ತಾನದ ರಕ್ತದಲ್ಲಿಯೇ ಕಾಶ್ಮೀರವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ತಾವು ಮತ್ತೆ ರಾಜಕೀಯ ರಂಗದಲ್ಲಿ ಸಕ್ರಿಯನಾಗಿದ್ದೇನೆಂದು ಸೋಮವಾರ ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನದ ರಕ್ತದಲ್ಲಿಯೇ ಕಾಶ್ಮೀರವಿದೆ: ಹೇಳಿಕೆ ಮೂಲಕ ರಾಜಕೀಯ ಸಕ್ರಿಯ ಘೋಷಿಸಿದ ಮುಷರಫ್
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್
Published On :

ಇಸ್ಲಾಮಾಬಾದ್: ಪಾಕಿಸ್ತಾನದ ರಕ್ತದಲ್ಲಿಯೇ ಕಾಶ್ಮೀರವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ತಾವು ಮತ್ತೆ ರಾಜಕೀಯ ರಂಗದಲ್ಲಿ ಸಕ್ರಿಯನಾಗಿದ್ದೇನೆಂದು ಸೋಮವಾರ ಘೋಷಣೆ ಮಾಡಿದ್ದಾರೆ. 

ಪ್ರಸ್ತುತ ದುಬೈನಲ್ಲಿ ನೆಲೆಯೂರಿರುವ ಮುಷರಫ್, ಕಾಶ್ಮೀರ ವಿಚಾರ ಕುರಿತಂತೆ ಮಾತನಾಡುವ ಮೂಲಕ ಭಾರತದ ವಿರುದ್ಧ ಕಿಡಿಕಾರಿದ್ದಾರೆ. 

ಪಾಕಿಸ್ತಾನದ ಶಾಂತಿಯ ಪ್ರಸ್ತಾವನೆಯ ನಡುವಲ್ಲಿಯೂ ಭಾರತ ಪದೇ ಪದೇ ಇಸ್ಲಾಮಾಬಾದ್'ಗೆ ಬೆದರಿಕೆ ಹಾಕುತ್ತಿದೆ ಎಂದು ಹೇಳಿಕೊಂಡಿದ್ದಾರೆ. 

ಇದೇ ವೇಳೆ 370 ವಿಧಿ ರದ್ದು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಏನೇ ಆದರೂಕಾಶ್ಮೀರಿ ಸಹೋದರರ ಪರವಾಗಿ ನಾವು ನಿಲ್ಲುತ್ತೇವೆ. ಪಾಕಿಸ್ತಾನದ ಶಾಂತಿ ಪ್ರಸ್ತಾವನೆಯನ್ನು ನಮ್ಮ ದುರ್ಬಲವೆಂದು ತಿಳಿಯಬಾರದು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.