ಮಹಾತ್ಮ ಗಾಂಧಿ 150ನೇ ಜನ್ಮದಿನ: ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ಯಾಲೆಸ್ಟೈನ್
ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ನಿಮಿತ್ತ ಪ್ಯಾಲೆಸ್ಟೈನ್ ಸರ್ಕಾರ ವಿಶೇಷ ಅಂಚೇ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತದ ರಾಷ್ಟ್ರಪಿತ ಗಾಂಧಿಗೆ ಗೌರವ ಸಮರ್ಪಣೆ ಮಾಡಿದೆ.

ರಮಲ್ಲಾ: ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ನಿಮಿತ್ತ ಪ್ಯಾಲೆಸ್ಟೈನ್ ಸರ್ಕಾರ ವಿಶೇಷ ಅಂಚೇ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತದ ರಾಷ್ಟ್ರಪಿತ ಗಾಂಧಿಗೆ ಗೌರವ ಸಮರ್ಪಣೆ ಮಾಡಿದೆ.
ಇಂದು ಪ್ಯಾಲೆಸ್ಟ್ಮೈನ್ ಸರ್ಕಾರ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಮಂಗಳವಾರ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಪ್ಯಾಲೆಸ್ಟೈನ್ನಲ್ಲಿರುವ ಭಾರತದ ಪ್ರತಿನಿಧಿ ಸುನೀಲ್ ಕುಮಾರ್ ಸಮ್ಮುಖದಲ್ಲಿ ಪ್ಯಾಲೆಸ್ಟೈನ್ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಇಶಾಕ್ ಸೆಡೆರ್ ಅಂಚೆ ಚೀಟಿ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಪ್ಯಾಲೆಸ್ಟೈನ್ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಇಶಾಕ್ ಸೆಡೆರ್, ಮಹಾತ್ಮ ಗಾಂಧಿಯವರು ತೋರಿದ ಅಹಿಂಸೆ, ಮೌಲ್ಯಗಳು, ಬುದ್ಧಿವಂತಿಕೆ ಮತ್ತು ದೂರದೃಷ್ಟಿ ತತ್ವಗಳನ್ನುಒತ್ತಿ ಹೇಳಿದರು.
ಮಹಾತ್ಮ ಗಾಂಧಿಯವರ 150ನೇ ಜನ್ಮದಿನೋತ್ಸವ ಯಶಸ್ವಿಗೊಳಿಸಲು ಭಾರತ ಸರ್ಕಾರ ಒಂದು ವರ್ಷದಿಂದ ರಮಲ್ಲಾ ಸೇರಿದಂತೆ ವಿವಿಧ ನಗರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಪಾರ ಪ್ರಮಾಣದಲ್ಲಿ ಪ್ಯಾಲೆಸ್ಟೈನ್ ಯುವಕರು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


