ವಿದೇಶ

ಕೌಟುಂಬಿಕ ಕಲಹ: ಪತ್ನಿ, ಮೂವರು ಮಕ್ಕಳಿಗೆ ಗುಂಡಿಕ್ಕಿ ಪತಿ ಆತ್ಮಹತ್ಯೆ!

ವ್ಯಕ್ತಿಯೊಬ್ಬ ಪತ್ನಿ ಹಾಗೂ ಮೂವರು ಮಕ್ಕಳಿಗೆ ಗುಂಡಿಕ್ಕಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಕೌಟುಂಬಿಕ ಕಲಹ: ಪತ್ನಿ, ಮೂವರು ಮಕ್ಕಳಿಗೆ ಗುಂಡಿಕ್ಕಿ ಪತಿ ಆತ್ಮಹತ್ಯೆ!
ಕೌಟುಂಬಿಕ ಕಲಹ: ಪತ್ನಿ, ಮೂವರು ಮಕ್ಕಳಿಗೆ ಗುಂಡಿಕ್ಕಿ ಪತಿ ಆತ್ಮಹತ್ಯೆ!
Published On :

ಕ್ಯಾಲಿಫೋರ್ನಿಯಾ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಮೂವರು ಮಕ್ಕಳಿಗೆ ಗುಂಡಿಕ್ಕಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಶನಿವಾರ ಈ ಘಟನೆ ನಡೆದಿದ್ದು  5, 9 ಮತ್ತು 11 ವರ್ಷದ ಮಕ್ಕಳು ಸಾವಿಗೀಡಾಗಿದ್ದಾರೆ. ಆನಂತರ ವ್ಯಕ್ತಿ ತನ್ನ ಪತ್ನಿಗೆ ಶೂಟ್ ಮಾಡಿದ್ದಲ್ಲದೆ ಕಡೆಗೆ ತನಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಲಹವು ಘಟನೆಗೆ ಕಾರಣವೆನ್ನಲಾಗಿದ್ದು ಶನಿವಾರ ಬೆಳಗಿನ ಜಾವ ಸಹ ಯಾವುದೋ ಕಾರಣಕ್ಕೆ ಪತಿ-ಪತ್ನಿಯರಲ್ಲಿ ಜಗಳವಾಗಿದೆ.  ಆ ವೇಳೆ ಮನೆಯಲ್ಲಿದ್ದ ಹ್ಯಾಂಡ್ ಗನ್ ನಿಂದ ಪತಿ ಮಕ್ಕಳು ಹಾಗೂ ಹೆಂಡತಿಗೆ ಶೂಟ್ ಮಾಡಿ ಕಡೆಗೆ ತಾನೂ ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾನೆ. ಇನ್ನು ಮೃತರ ಹೆಸರು ಬಹಿರಂಗವಾಗಿಲ್ಲ.

ಗುಂಡಿನ ಸದ್ದು ಕೇಳಿ ನೆರೆಹೊರೆಯವರು ಆಗಮಿಸಿದಾಗ ನಾಲ್ವರು ಮೃತಪಟ್ಟಿರುವ ಘಟನೆ ಬೆಳಕು ಬಂದಿದೆ. ಓರ್ವ ಬಾಲಕ ಗಂಭೀರ ಗಾಯಗೊಂಡಿದ್ದು ಆಪತ್ರೆಗೆ ದಾಖಲಾಗಿದೆ ಎಂದು  ಸ್ಯಾನ್ ಡಿಯಾಗೋ ಪೊಲೀಸ್ ಲೆಫ್ಟಿನೆಂಟ್ ಮ್ಯಾಟ್ ಡಾಬ್ಸ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.