ವಿದೇಶ

ಪಂಚತಾರಾ ಹೋಟೆಲ್ ಮೇಲೆ ದಾಳಿ ಬೆನ್ನಲ್ಲೇ, ಜೆಯುಡಿ, ಜೆಇಎಂ ಸೇರಿ 11 ಉಗ್ರ ಸಂಘಟನೆಗಳ ನಿಷೇಧಿಸಿದ ಪಾಕಿಸ್ತಾನ

ತನ್ನ ಬುಡಕ್ಕೆ ಪೆಟ್ಟು ಬೀಳದ ಹೊರತು ಬುದ್ದಿ ಬರುವುದಿಲ್ಲ ಎಂಬ ಮಾತು ಪಾಕಿಸ್ತಾನ ವಿಚಾರದಲ್ಲಿ ಮತ್ತೆ ಸಾಬೀತಾಗಿದ್ದು, ಪಂಚತಾರಾ ಹೊಟೆಲ್ ದಾಳಿ ಬೆನ್ನಲ್ಲೇ ಇಮ್ರಾನ್ ಖಾನ್ ಸರ್ಕಾರ ಜೆಯುಡಿ, ಜೆಇಎಂ ಸೇರಿ 11 ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ.

ಪಂಚತಾರಾ ಹೋಟೆಲ್ ಮೇಲೆ ದಾಳಿ ಬೆನ್ನಲ್ಲೇ, ಜೆಯುಡಿ, ಜೆಇಎಂ ಸೇರಿ 11 ಉಗ್ರ ಸಂಘಟನೆಗಳ ನಿಷೇಧಿಸಿದ ಪಾಕಿಸ್ತಾನ
ಸಂಗ್ರಹ ಚಿತ್ರ
Published On :
ಇಸ್ಲಾಮಾಬಾದ್: ತನ್ನ ಬುಡಕ್ಕೆ ಪೆಟ್ಟು ಬೀಳದ ಹೊರತು ಬುದ್ದಿ ಬರುವುದಿಲ್ಲ ಎಂಬ ಮಾತು ಪಾಕಿಸ್ತಾನ ವಿಚಾರದಲ್ಲಿ ಮತ್ತೆ ಸಾಬೀತಾಗಿದ್ದು, ಪಂಚತಾರಾ ಹೊಟೆಲ್ ದಾಳಿ ಬೆನ್ನಲ್ಲೇ ಇಮ್ರಾನ್ ಖಾನ್ ಸರ್ಕಾರ ಜೆಯುಡಿ, ಜೆಇಎಂ ಸೇರಿ 11 ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ.
ಸಂಸತ್ ದಾಳಿ ರೂವಾರಿ, ಉಗ್ರ ಮಸೂದ್ ಅಜರ್ ನೇತೃತ್ವದ ಜೈಷ್ ಇ ಮೊಹಮದ್, 2008 ಮುಂಬೈ ದಾಳಿ ರೂವಾರಿ ಹಫೀಜ್ ಸೈಯ್ಯೀದ್ ನೇತೃತ್ವದ ಜಮಾತ್ ಉದ್ ದವಾ, ಫಲಾಹ್ ಇ ಇನ್ಸಾನಿಯತ್ ಸೇರಿದಂತೆ ಒಟ್ಟು 11 ಸಂಘಟನೆಗಳನ್ನು ನಿಷೇಧಿಸಿದೆ. ಇಮ್ರಾನ್ ಖಾನ್ ನೇತೃತ್ವದಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಕಿಸ್ತಾನ ಸರ್ಕಾರ ತನ್ನ ಆ್ಯಕ್ಷನ್ ಪ್ಲಾನ್ ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಕಳೆದ ಮೇ 1ರಂದು ವಿಶ್ವಸಂಸ್ಥೆ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ನಿನ್ನೆಯಷ್ಟೇ ಉಗ್ರರು ಮುಂಬೈ ದಾಳಿ ಮಾದರಿಯಲಿ ಪಾಕಿಸ್ತಾನದ ಪಂಚತಾರಾ ಹೊಟೆಲ್ ಗೆ ನುಗ್ಗಿ ದಾಳಿ ಮಾಡಿದ್ದಾರೆ. 
ನಿಷೇಧಗೊಂಡ ಸಂಘಟನೆಗಳು:
1. ಅಲ್ ಅನ್ಫಾಲ್ ಟ್ರಸ್ಟ್
2. ಇದಾರಾ ಇ ಕಿದ್ಮತ್ ಇ ಖೈಗ್ 
3. ಅಲ್ ದಾವತ್ ಉಲ್ ಇರ್ಷಾದ್
4. ಅಲ್ ಫಜಲ್ ಫೌಂಡೇಷನ್ ಮತ್ತು ಟ್ರಸ್ಟ್
5. ಮಾಸ್ಕ್ ಅಂಡ್ ವೆಲ್ ಫೇರ್ ಟ್ರಸ್ಟ್
6. ಅಲ್ ಮದೀನಾ ಫೌಂಡೇಷನ್
7. ಮೋವಾಜ್ ಬಿನ್ ಜಬಿ ಎಜುಕೇಷನ್ ಟ್ರಸ್ಟ್
8. ಅಲ್ ಎಸ್ಸಾರ್  ಫೌಂಡೇಷನ್
9. ಅಲ್ ರಹ್ಮತ್ ಟ್ರಸ್ಟ್ ಆರ್ಗನೈಜೇಷನ್
10. ಅಲ್ ಹಮಾದ್ ಟ್ರಸ್ಟ್
11. ಅಲ್ ಫುರ್ಖಾನ್ ಟ್ರಸ್ಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.