ವಿದೇಶ

ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದ ಚೀನಾ; 30,000 ವಿಶ್ವ ಭೂಪಟಗಳ ನಾಶ!

ಚೀನಾದಲ್ಲಿ ಪ್ರಕಟವಾಗುತ್ತಿದ್ದ 30,000 ಭೂಪಟಗಳನ್ನು ನಾಶ ಮಾಡಲಾಗಿದ್ದು, ಭಾರತದ ಭೂ ಪ್ರದೇಶವಾಗಿರುವ ಅರುಣಾಚಲ ದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆದುಕೊಂಡಿದೆ.

ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದ ಚೀನಾ; 30,000 ವಿಶ್ವ ಭೂಪಟಗಳ ನಾಶ!
ತಪ್ಪಾಗಿರುವ 30,000 ಭೂಪಟಗಳ ನಾಶ: ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದ ಚೀನಾ!
Published On :
ಬೀಜಿಂಗ್: ಚೀನಾದಲ್ಲಿ ಮುದ್ರಿಸಲಾಗಿದ್ದ 30,000 ವಿಶ್ವ ಭೂಪಟಗಳನ್ನು ನಾಶ ಮಾಡಲಾಗಿದ್ದು, ಭಾರತದ ಭೂ ಪ್ರದೇಶವಾಗಿರುವ ಅರುಣಾಚಲ ದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆದುಕೊಂಡಿದೆ.
ಅರುಣಾಚಲ ಪ್ರದೇಶ ಹಾಗೂ ತೈವಾನ್ ನ್ನು ಚೀನಾದಿಂದ ಬೇರ್ಪಡಿಸಿ ರಚಿಸಲಾಗಿದ್ದ ಭೂಪಟಗಳನ್ನು ಚೀನಾ ಅಧಿಕಾರಿಗಳು ನಾಶ ಮಾಡಿದ್ದಾರೆ. ಅರುಣಾಚಲ ಪ್ರದೇಶವನ್ನು ಚೀನಾ ಲಗಾಯ್ತಿನಿಂದ ದಕ್ಷಿಣ ಟಿಬೆಟ್ ಎಂದೇ ಪರಿಗಣಿಸುತ್ತಿದೆ. ಅರುಣಾಚಲ ಪ್ರದೇಶಕ್ಕೆ ಭಾರತದ ಯಾವುದೇ ನಾಯಕರು ಭೇಟಿ ನೀಡಿದರೂ ಸಹ ಅದನ್ನು ಚೀನಾ ವಿರೋಧಿಸುತ್ತದೆ. ಇದಷ್ಟೆ ಅಲ್ಲದೇ ತೈವಾನ್ ನ್ನೂ ಸಹ ತನ್ನದೇ ಭೂ ಪ್ರದೇಶವೆಂದು ಪ್ರತಿಪಾದನೆ ಮಾಡುತ್ತದೆ. ಚೀನಾ ಈಗ ನಾಶಪಡಿಸಿರುವ ಭೂಪಟಗಳನ್ನು ರಫ್ತು ಮಾಡುವುದಕ್ಕಾಗಿಯೇ ತಯಾರಿಸಿತ್ತು. ಆದರೆ ಅರುಣಾಚಲ ಪ್ರದೇಶ ಹಾಗೂ ತೈವಾನ್ ಭೂಪಟದಲ್ಲಿಲ್ಲದ ಕಾರಣ ಅದನ್ನು ನಾಶಪಡಿಸಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.