ಕ್ರೈಸ್ತ್ ಚರ್ಚ್ ಗುಂಡಿನ ದಾಳಿ: ರೈಫಲ್ ಮಾರಾಟಕ್ಕೆ ನಿಷೇಧ ಹೇರಿದ ನ್ಯೂಜಿಲ್ಯಾಂಡ್
ನ್ಯೂಜಿಲ್ಯಾಂಡ್ ನ ಕ್ರೈಸ್ತ್ ಚರ್ಚ್ ಮಸೀದಿಯಲ್ಲಿ ನಡೆದ ಗುಂಡಿನ ದಾಳಿ ನಂತರ ನ್ಯೂಜಿಲ್ಯಾಂಡ್ ಸರ್ಕಾರ ಅರೆ ಸ್ವಯಂಚಾಲಿತ ಸೇರಿ ಎಲ್ಲಾ ನಮೂನೆಯ ರೈಫಲ್ ಗಳ ಮಾರಾಟವನ್ನು....

Published On :
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ನ ಕ್ರೈಸ್ತ್ ಚರ್ಚ್ ಮಸೀದಿಯಲ್ಲಿ ನಡೆದ ಗುಂಡಿನ ದಾಳಿ ನಂತರ ನ್ಯೂಜಿಲ್ಯಾಂಡ್ ಸರ್ಕಾರ ಅರೆ ಸ್ವಯಂಚಾಲಿತ ಸೇರಿ ಎಲ್ಲಾ ನಮೂನೆಯ ರೈಫಲ್ ಗಳ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ ಬಂದೂಕುಗಳ ಖರೀದಿ ನಿಯಮಾವಳಿಯನ್ನು ಕಠಿಣವನ್ನಾಗಿಸಿದೆ.
ನ್ಯೂಜಿಲೆಂಡ್ನ ಪ್ರಧಾನ ಮಂತ್ರಿ ಜಸಿಂದಾ ಆಡ್ರೆನ್ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ರೈಫಲ್ ಮಾರಾಟಕ್ಕೆ ನಿಷೇಧ ಹೇರಿದ್ದಾರೆ.
ಮಿಲಿಟರಿ ಮಾದರಿಯ ಎಲ್ಲಾ ನಮೂನೆಯ ಅರೆ ಸ್ವಯಂಚಾಲಿತ ರೈಫಲ್ ಗಳ ಮೇಲೆ ನಿಷೇಧ ಹೇರಲಾಗಿದೆ. ಅಲ್ಲದೆ ಹೆಚ್ಚು ಸಾಮರ್ಥ್ಯದ ರೈಫಲ್ಸ್, ಮ್ಯಾಗಜೀನ್ ರೈಫಲ್ಸ್ ಗಳನ್ನು ಸಹ ನಿಷೇಧಿಸಿ ಆದೇಶ ಹೊರಡಿಸಿದೆ.
ಇದಾಗಲೇ ಇಂತಹಾ ಆಯುಧಗಳನ್ನಿರಿಸ್ಕೊಂಡವರೂ ಸಹ ಈ ನಿಯಮದಡಿ ಬರಲಿದ್ದು ಅವರು ಸರ್ಕಾರಕ್ಕೆ ತಮ್ಮಲ್ಲಿನ ಆತ್ಯ್ಧವನ್ನು ಹಿಂತಿರುಗಿಸಬೇಕುದೆ. ಇನ್ನು ಆಯುಧ ಖರೀದಿಗಾಗಿ ಅತಿ ಶೀಘ್ರವೇ ಹೊಸ ಕಾನೂನು ರಚನೆಯಾಗಲಿದ್ದು ಒಂದೊಮ್ಮೆ ಕಾನೂನು ಬಾಹಿರ ಶಸ್ತ್ರಾಸ್ತ್ರ ಹೊಂದಿದ್ದರೆ ಅವರಿಗೆ 4,000 ಡಾಲರ್ ದಂಡ ಹಾಗು ಮೂರು ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸುವ ನ್ನಿಯಮಾವಳಿಯನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ.
ರಾಷ್ಟ್ರೀಯ ಭದ್ತರೆಯ ಹೊತಾಸಕ್ತಿಯನ್ನಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
New Zealandನ್ಯೂಜಿಲ್ಯಾಂಡ್Jacinda ArdernChrist church shootinggun lawಜಸಿಂದಾ ಆಡ್ರೆನ್ಕ್ರೈಸ್ಟ್ ಚರ್ಚ್ ಶೂಟಿಂಗ್ಗನ್ ಕಾನೂನು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


