ಡಬ್ಲ್ಯುಎಚ್ಒ ಮುಖ್ಯ ವಿಜ್ಞಾನಿಯಾಗಿ ಸೌಮ್ಯ ಸ್ವಾಮಿನಾಥನ್ ನೇಮಕ
ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕಿಯಾಗಿದ್ದ ಸೌಮ್ಯ ಸ್ವಾಮಿನಾಥನ್ ಅವರನ್ನು ಸಂಸ್ಥೆಯಲ್ಲಿನ ಸುಧಾರಣಾ ಕ್ರಮಗಳ ಬಾಗವಾಗಿ ಮುಖ್ಯ ವಿಜ್ಞಾನಿಯಾಗಿ ನೇಮಕ ಮಾಡಲಾಗಿದೆ.

Published On :
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕಿಯಾಗಿದ್ದ ಸೌಮ್ಯ ಸ್ವಾಮಿನಾಥನ್ ಅವರನ್ನು ಸಂಸ್ಥೆಯಲ್ಲಿನ ಸುಧಾರಣಾ ಕ್ರಮಗಳ ಬಾಗವಾಗಿ ಮುಖ್ಯ ವಿಜ್ಞಾನಿಯಾಗಿ ನೇಮಕ ಮಾಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಮ್ಯುಖ ಕಾರ್ಯಗಳು, ನಿಗದಿಪಡಿಸಬಹುದಾಫ಼ ಮಾನದಂಡಗಳು ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕಾಗಿ ರಚಿಸಲಾಗಿರುವ ನೂತನ ವಿಭಾಗದ ನೇತೃತ್ವವನ್ನು ಸ್ವಾಮಿನಾಥನ್ ವಹಿಸಿಕೊಳ್ಳುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮೂವರು ಉಪ ಮಹಾನಿರ್ದೇಶಕರಲ್ಲಿ ಒಬ್ಬರಾಗಿದ್ದ ಸೌಮ್ಯಾ ಸ್ವಾಮಿನಾಥನ್ ಈ ಹುದ್ದೆ ಅಲಂಕರಿಸಿರುವ ಪ್ರಥಮ ಭಾರತೀಯಳೆನ್ನುವುದು ವಿಶೇಷ.
ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆಯು ತನ್ನ ಮುನ್ನೂರು ಬಿಲಿಯನ್ ಗುರಿಗಳನ್ನು ಪೂರೈಸಿಕೊಳ್ಳುವುದು ಅಗತ್ಯ."ಸಾರ್ವತ್ರಿಕ ಆರೋಗ್ಯ ರಕ್ಷಣೆಯಿಂದ ಒಂದು ಶತಕೋಟಿ ಜನರಿಗೆ ಲಾಭವಾಗಿದ್ದು ಈಗ ಸಮಯ ಬದಲಾಗಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ನಮ್ಮ ಧ್ಯೇಯೋದ್ದೇಶವನ್ನು ಬದಲಿಸಿಕೊಳ್ಳುತ್ತಿದ್ದೇವೆ" ಡಬ್ಲ್ಯುಎಚ್ ಒ ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
World Health Organisationವಿಶ್ವ ಆರೋಗ್ಯ ಸಂಸ್ಥೆSoumya Swaminathanಸೌಮ್ಯ ಸ್ವಾಮಿನಾಥನ್chief scientistಮುಖ್ಯ ವಿಜ್ಞಾನಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


