ಮಹಿಳಾ ದಿನ: ಮೊದಲ ಬಾರಿಗೆ ಪಾಕ್ ಸೆನೆಟ್ ಸಭಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ದಲಿತ ಮಹಿಳೆ
ಪಾಕಿಸ್ತಾನದ ಹಿಂದೂ ದಲಿತ ಸಮುದಾಯದ ಮೊದಲ ಮಹಿಳಾ ಸಂಸದೆ ಕೃಷ್ಣ ಕುಮಾರಿ ಕೊಹ್ಲಿ ಅವರು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ....

Published On :
ಇಸ್ಲಾಮಾಬಾದ್: ಪಾಕಿಸ್ತಾನದ ಹಿಂದೂ ದಲಿತ ಸಮುದಾಯದ ಮೊದಲ ಮಹಿಳಾ ಸಂಸದೆ ಕೃಷ್ಣ ಕುಮಾರಿ ಕೊಹ್ಲಿ ಅವರು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ಪಾಕ್ ಸಂಸತ್ ನ ಸಭಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಮಹಿಳಾ ದಿನದ ಅಂಗವಾಗಿ ನಮ್ಮ ಸಹೋದ್ಯೋಗಿ ಕೃಷ್ಣ ಕುಮಾರಿ ಅವರನ್ನು ಸಭಾಧ್ಯಕ್ಷೆಯಾಗಿ ಮಾಡಲು ನಮ್ಮ ಸೆನೆಟ್ ಸಭಾಧ್ಯಕ್ಷರು ನಿರ್ಧರಿಸಿದ್ದಾರೆ ಎಂದು ಸಂಸದ ಫೈಸಾಲ್ ಜಾವೇದ್ ಅವರು ಟ್ವೀಟ್ ಮಾಡಿದ್ದಾರೆ.
40 ವರ್ಷದ ಕೃಷ್ಣ ಕುಮಾರ್ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದು, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿರುವ ಕೆಲವೇ ಹಿಂದೂ ಕುಟುಂಬಗಳ ಪೈಕಿ ಕೊಹ್ಲಿ ಅವರ ಕುಟುಂಬವೂ ಒಂದು. ಕೊಹ್ಲಿ ಎಂಬುದು ಪಾಕಿಸ್ತಾನದ ದಲಿತ ಸಮುದಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
In a firstKrishna Kumari KohliPakistan Senate sessionಇದೇ ಮೊದಲುಕೃಷ್ಣ ಕುಮಾರಿ ಕೊಹ್ಲಿಪಾಕಿಸ್ತಾನ ಸೆನೆಟ್ ಅಧಿವೇಶನ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


