ವಿದೇಶ

ಅಮೆರಿಕಾದ ಅಲಬಾಮಾದಲ್ಲಿ ಭೀಕರ ಸುಂಟರಗಾಳಿ; 22 ಮಂದಿ ಸಾವು, ಹಲವರು ಗಾಯ

ಅಮೆರಿಕಾದ ಆಗ್ನೇಯ ಭಾಗದ ಅಲಬಾಮಾ ರಾಜ್ಯದಲ್ಲಿ ಭಾರೀ ಸುಂಟರಗಾಳಿ ಅಪ್ಪಳಿಸಿದ ಪರಿಣಾಮ ಕನಿಷ್ಠ 22 ಮಂದಿ ಮೃತಪಟ್ಟು ...

ಅಮೆರಿಕಾದ ಅಲಬಾಮಾದಲ್ಲಿ ಭೀಕರ ಸುಂಟರಗಾಳಿ; 22 ಮಂದಿ ಸಾವು, ಹಲವರು ಗಾಯ
ಅಲಬಾಮಾದಲ್ಲಿ ಸುಂಟರಗಾಳಿ ನಂತರ ಅವಶೇಷಗಳಡಿಯಲ್ಲಿ ಸಾಗುತ್ತಿರುವ ಜೋಡಿ
Published On :
ಬೆರೆಗಾರ್ಡ್:ಅಮೆರಿಕಾದ ಆಗ್ನೇಯ ಭಾಗದ ಅಲಬಾಮಾ ರಾಜ್ಯದಲ್ಲಿ ಭಾರೀ ಸುಂಟರಗಾಳಿ ಅಪ್ಪಳಿಸಿದ ಪರಿಣಾಮ ಕನಿಷ್ಠ 22 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಕೂಡ ಹಾನಿಗೀಡಾಗಿದೆ ಎಂದು ಅಸೋಸಿಯೆಟ್ ಪ್ರೆಸ್ ವರದಿ ಮಾಡಿದೆ.
ಸದ್ಯ 22 ಮಂದಿ ಮೃತಪಟ್ಟ ಬಗ್ಗೆ ದೃಢವಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಲೀ ಕೌಂಟಿಯ ಶೆರಿಫ್ ಜೆ ಜೋನ್ಸ್ ತಿಳಿಸಿದ್ದಾರೆ.
ಸುಂಟರಗಾಳಿಯಲ್ಲಿ ತೀವ್ರ ಹಾನಿಗೀಡಾದ ಪ್ರದೇಶಗಳ ಮೇಲೆ ಡ್ರೋನ್ ಹಾರಾಟ ನಡೆಸಿ ಪರಿಶೀಲಿಸುತ್ತಿದೆ. ಆದರೆ ಅಲ್ಲಿ ಇನ್ನೂ ಕೂಡ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎನ್ನಲಾಗಿದೆ.
ಇಂದು ಬೆಳಗ್ಗೆಯಿಂದ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಬೆರೆಗಾರ್ಡ್ ಸುತ್ತಮುತ್ತ ಕಾಣಿಸಿಕೊಂಡ ಸುಂಟರಗಾಳಿ ಅರ್ಧ ಮೈಲಿನವರೆಗೆ ಆಸ್ತಿಪಾಸ್ತಿ ಹಾನಿ ಮತ್ತು ನಷ್ಟ ಕಂಡುಬಂದಿದೆ.
ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆ ನಂತರ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸುಂಟರಗಾಳಿ ಕ್ರಮೇಣ ತನ್ನ ವೇಗವನ್ನು ಗಣನೀಯವಾಗಿ ಹೆಚ್ಚಳ ಮಾಡಿಕೊಂಡಿತು. ಒಂದರ ಹಿಂದೊಂದರಂತೆ ಸರಣಿ ಸುಂಟರಗಾಳಿ ಸಷ್ಟಿಯಾಗಿದ್ದು, ಸುಂಟರಗಾಳಿಗೆ ಸಿಕ್ಕ ಎಲ್ಲ ವಸ್ತುಗಳನ್ನು ವೇಗವಾದ ಗಾಳಿ ಹೊತ್ತೊಯ್ದಿದೆ. ಸಾಕಷ್ಟು ಮನೆಗಳು, ಕಟ್ಟಡಗಳು ಹಾನಿಗೊಳಗಾಗಿದ್ದು, ಸಾವಿರಾರು ಜನರು ಸೂರಿಲ್ಲದೆ ನಿರಾಶ್ರಿತರಾಗಿದ್ದಾರೆ.
ಹಾನಿಗೀಡಾದ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.