ಮೆಕ್ಸಿಕೋ ಗಡಿಯಲ್ಲಿ ಅಪ್ಪ- ಮಗಳ ದಾರುಣ ಸಾವಿನ ಚಿತ್ರ, ಮಮ್ಮಲ ಮರುಗಿದ ವಿಶ್ವ
ಮೆಕ್ಸಿಕೋದ ರಿಯೋ ಗ್ರಾಂಡ್ ನದಿಯನ್ನು ದಾಟಿ ದುಡಿಮೆ, ಒಳ್ಳೆಯ ಬದುಕು ಕಟ್ಟಿಕೊಳ್ಳುವ ದಾವಂತದಲ್ಲಿ ಅಕ್ರಮವಾಗಿ ಅಮೆರಿಕಾಗೆ ತೆರಳಬೇಕೆಂಬ...

Published On :
ವಿಶ್ವಸಂಸ್ಥೆ: ಮೆಕ್ಸಿಕೋದ ರಿಯೋ ಗ್ರಾಂಡ್ ನದಿಯನ್ನು ದಾಟಿ ದುಡಿಮೆ, ಒಳ್ಳೆಯ ಬದುಕು ಕಟ್ಟಿಕೊಳ್ಳುವ ದಾವಂತದಲ್ಲಿ ಅಕ್ರಮವಾಗಿ ಅಮೆರಿಕಾಗೆ ತೆರಳಬೇಕೆಂಬ ಪ್ರಯತ್ನದಲ್ಲಿ ತಂದೆ ಹಾಗೂ ಪುಟ್ಟ ಮಗಳು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ದೃಶ್ಯ ಇಡೀ ವಿಶ್ವವನ್ನೇ ಮನಕಲಕುವಂತೆ ಮಾಡಿದೆ.
ಅಮರಿಕಾ – ಮೆಕ್ಸಿಕೋ ಗಡಿಯಲ್ಲಿ ನೂರಾರು ಮಂದಿ ಉದ್ಯೋಗ, ದುಡಿಮೆಗಾಗಿ ಅಕ್ರಮ ವಲಸೆಗಾಗಿ ನಡೆಸುವ ಪ್ರಕ್ರಿಯೆಯಲ್ಲಿ ಇಂತಹ ದಾರಣ ಸಾವುಗಳು ಸುದ್ಧಿ ಸಂಸ್ಥೆಯ ಛಾಯಾಚಿತ್ರಗಳ ಮೂಲಕ ಮನುಷ್ಯತ್ವ ಹೊಂದಿರುವರನ್ನು ತೀವ್ರವಾಗಿ ಬಾಧಿಸುವಂತೆ ಮಾಡುತ್ತಿವೆ.
ಖಂಡಿತವಾಗಿಯೂ ತಪ್ಪಿಸಬಹುದಾದ ಇಂತಹ ಸಾವುಗಳನ್ನು ತಡೆಯಲು ಸಂಬಂಧ ಪಟ್ಟ ದೇಶಗಳು ಇನ್ನಾದರೂ ಮುಂದಾಗಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಯುಎನ್ ಹೆಚ್ ಸಿ ಆರ್ ಮನವಿ ಮಾಡಿದೆ.
ಅಮೆರಿಕಾ ಹಾಗೂ ಮೆಕ್ಸಿಕೊ ದೇಶಗಳನ್ನು ವಿಭಜಿಸಿರುವ ರಿಯೋ ಗ್ರಾಂಡ್ ನದಿ ದಾಟುವ ವೇಳೆ ಎಲ್ ಸಾಲ್ವಡೇರ್ ನ ಆಸ್ಕರ್ ರಮಿರೇಜ್ ಹಾಗೂ ಆತನ ಎರಡು ವರ್ಷದ ಪುಟ್ಟಮಗಳು ವಲೇರಿಯಾ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಚಿತ್ರದ ಬಗ್ಗೆ ವಿಶ್ವಸಂಸ್ಥೆಯ ಏಜೆನ್ಸಿಯ ಮುಖ್ಯಸ್ಥ ಫಿಲಿಪ್ಪೋ ಗ್ರಾಂಡಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ತಂದೆ ಮಗಳ ಸಾವು, “ಹಿಂಸಾಚಾರ ಹಾಗೂ ಹತಾಷೆ”ಯನ್ನು ತೊಲಗಿಸುವಲ್ಲಿ ಉಂಟಾಗಿರುವ ವೈಫಲ್ಯತೆಯ ಸಂಕೇತವಾಗಿದ್ದು, ಘನತೆ ಹಾಗೂ ಸುರಕ್ಷಿತ ಜೀವನ ಹುಡುಕಿಕೊಳ್ಳಲು ಜನರನ್ನು ಆಪಾಯಕಾರಿ ಪಯಣ ಕೈಗೊಳ್ಳುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಲಸಿಗರಿಗೆ ಸುರಕ್ಷಿತ ಮಾರ್ಗಗಳಿಲ್ಲದ ಕಾರಣ ತಮ್ಮ ಜೀವಗಳನ್ನು ಪಣವಾಗಿರಿಸುತ್ತಿದ್ದಾರೆ. ಅಮೆರಿಕಾ, ಆಶ್ರಯ ಕೋರಿ ತನ್ನಲ್ಲಿಗೆ ಬರುವ ವಲಸಿಗರ ಕುರಿತ ತನ್ನ ಕಠಿಣ ನಿಲುವುಗಳನ್ನು ಪರಿಷ್ಕರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


