ವಿದೇಶ

'ಆ್ಯಪಲ್' ಕಂಪನಿ ಹಣ್ಣು ಎಂದು ಹೇಳಿ ಟ್ರೋಲ್‍ಗೆ ಗುರಿಯಾದ ಪಾಕ್ ನಿರೂಪಕಿ, ವಿಡಿಯೋ ವೈರಲ್!

ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ಹೇಳಿ ಪಾಕಿಸ್ತಾನ ಟಿವಿ ಚಾನೆಲ್ ನಿರೂಪಕಿಯೊಬ್ಬರು ಟ್ರೋಲ್‍ಗೆ ಗುರಿಯಾಗಿದ್ದಾರೆ.

'ಆ್ಯಪಲ್' ಕಂಪನಿ ಹಣ್ಣು ಎಂದು ಹೇಳಿ ಟ್ರೋಲ್‍ಗೆ ಗುರಿಯಾದ ಪಾಕ್ ನಿರೂಪಕಿ, ವಿಡಿಯೋ ವೈರಲ್!
ಸಂಗ್ರಹ ಚಿತ್ರ
Published On :
ಇಸ್ಲಾಮಾಬಾದ್: ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ಹೇಳಿ ಪಾಕಿಸ್ತಾನ ಟಿವಿ ಚಾನೆಲ್ ನಿರೂಪಕಿಯೊಬ್ಬರು ಟ್ರೋಲ್‍ಗೆ ಗುರಿಯಾಗಿದ್ದಾರೆ.
ಸಾಫ್ಟ್ ವೈರ್ ದಿಗ್ಗಜ ಆ್ಯಪಲ್ ಕಂಪನಿಯ ವಾರ್ಷಿಕ ಬಜೆಟ್ ಪಾಕಿಸ್ತಾನದ ಬಜೆಟ್ ಗಿಂತಲೂ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಪಾಕಿಸ್ತಾನದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ನೇರ ಪ್ರಸಾರದಲ್ಲಿ ಪತ್ರಕರ್ತ ನೈಲಾ ಇನಾಯತ್ ಹೇಳಿದ್ದರು. ಈ ವೇಳೆ ನಿರೂಪಕಿ ಹೌದು. ಸೇಬಿನ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲಿ ಹಲವು ರೀತಿಯ ವೈವಿಧ್ಯಗಳಿವೆ. ನಾನು ಈ ಬಗ್ಗೆ ಕೇಳಿದ್ದೇನೆ ಎಂದು ಹೇಳಿದರು. 
ಈ ವೇಳೆ ಎಚ್ಚೇತ ನೈಲಾ ಇನಾಯತ್ ನಾನು ಸಾಫ್ಟ್ ವೇರ್ ಕಂಪನಿ ಆ್ಯಪಲ್ ಬಗ್ಗೆ ಹೇಳುತ್ತಿದ್ದೇನೆ ವಿನಃ ಸೇಬಿನ ಹಣ್ಣಿನ ಬಗ್ಗೆ ಅಲ್ಲ ಎಂದು ಕಾಲೆಳೆದಿದ್ದಾರೆ. ಜುಲೈ 4ರಂದು ಪಾಕಿಸ್ತಾನದ ಪತ್ರಕರ್ತ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದರು. ಆ್ಯಪಲ್ ಬಗ್ಗೆ ಆಂಕರ್ ಕನ್ ಫ್ಯೂಸ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.