ವಿದೇಶ

ನ್ಯಾಟೋ ಹೊರತಾದ ಮಿತ್ರರಾಷ್ಟ್ರಗಳ ಪಟ್ಟಿಯಿಂದ ಪಾಕ್ ಹೆಸರು ಕೈಬಿಡಲು ಶಾಸನ ಪರಿಚಯಿಸಿದ ಅಮೆರಿಕಾ ಕಾಂಗ್ರೆಸ್

ಪಾಕಿಸ್ತಾನದ ಹೆಸರನ್ನು ನ್ಯಾತೋ ಹೊರತಾದ ಮಿತ್ರರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಲು ಅಮೆರಿಕಾ ಕಾಂಗ್ರೆಸ್ ನ ಶಾಅಸಕರು ಶಾನಸ ಜಾರಿಗೆ ಮುಂದಾಗಿದ್ದಾರೆ.

ನ್ಯಾಟೋ ಹೊರತಾದ ಮಿತ್ರರಾಷ್ಟ್ರಗಳ ಪಟ್ಟಿಯಿಂದ ಪಾಕ್ ಹೆಸರು ಕೈಬಿಡಲು ಶಾಸನ ಪರಿಚಯಿಸಿದ ಅಮೆರಿಕಾ ಕಾಂಗ್ರೆಸ್
ಇಮ್ರಾನ್ ಖಾನ್
Published On :
ವಾಷಿಂಗ್ಟನ್: ಪಾಕಿಸ್ತಾನದ ಹೆಸರನ್ನು ನ್ಯಾತೋ ಹೊರತಾದ ಮಿತ್ರರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಲು ಅಮೆರಿಕಾ ಕಾಂಗ್ರೆಸ್ ನ ಶಾಅಸಕರು ಶಾನಸ ಜಾರಿಗೆ ಮುಂದಾಗಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ರಿಪಬ್ಲಿಕನ್ ಕಾಂಗ್ರೆಸಿಗ ಆಂಡಿ ಬ್ರಿಗ್ಸ್ 73 ನೇ ನಿರ್ಣಯದ ಮೂಲಕ ಈ ಶಾಸನವನ್ನು ಪರಿಚಯಿಸಿದರು., ಪಾಕಿಸ್ತಾನವನ್ನು ನ್ಯಾಟೋ ಹೊರತಾದ ಪ್ರಮುಖ ಮಿತ್ರರಾಷ್ಟ್ರಗಳ ಪಟ್ಟಿಯಿಂದ ಕೈಬಿಡುವುದುಮತ್ತು ಒಂದೊಮ್ಮೆ ಮತ್ತೆ ಪಟ್ಟಿಗೆ ಸೇರಿಸಬೇಕಾದಲ್ಲಿ ಪೂರೈಸಬೇಕಾದ ಶರತ್ತುಗಳ ವಿವರ ಇದರಲ್ಲಿದೆ.

ಸದ್ಯ ಈ ಸಂಬಂಧ ಮಹತ್ವದ ತೀರ್ಮಾನ ತೆಗೆದುಕೊಳ್ಳುವುದಕ್ಕಾಗಿ ಶಾಸನವನ್ನು ವಿದೇಶಾಂಗ ವ್ಯವಹಾರಗಳ ಸಮಿತಿಗೆ ಹಸ್ತಾಂತರಿಸಲಾಗಿದೆ.

ಅಮೆರಿಕಾ ಅಧ್ಯಕ್ಷರು ಭವಿಷ್ಯದಲ್ಲಿ ಪಾಕ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎನ್ನುವ ಸೂಚನೆ ಇಲ್ಲಿದೆ.ಹಕ್ಕಾನಿ ನೆಟ್ವರ್ಕ್ ಸಂಬಂದಹ್ ಕಡಿದು ಹಾಕಲು ಪಾಕಿಸ್ತಾನ ಮುಂದಾಗಬೇಕಿದ್ದು ಇದಕ್ಕಾಗಿ ಪಾಕ್-ಅಫ್ಘಾನ್ ಗಡಿಗುಂಟ ಅಮೆರಿಕಾ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಲುವ ಸಾಧ್ಯತೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.