ಮದ್ಯದ ನಶೆಯಲ್ಲಿ ಕುಟುಂಬದವರನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಥಾಯ್ ವ್ಯಕ್ತಿ!
ಅತ್ತೆ ಮಾವನಿಂದ ಅವಮಾನಕ್ಕೊಳಗಾದೆ ಎಂದು ಬೇಸರಗೊಂಡು ತನ್ನಿಬ್ಬರು ಮಕ್ಕಳ ಸಹಿತ ಕುಟುಂಬದ ...

ಬ್ಯಾಂಕಾಕ್: ಅತ್ತೆ ಮಾವನಿಂದ ಅವಮಾನಕ್ಕೊಳಗಾದೆ ಎಂದು ಬೇಸರಗೊಂಡು ತನ್ನಿಬ್ಬರು ಮಕ್ಕಳ ಸಹಿತ ಕುಟುಂಬದ ಆರು ಸದಸ್ಯರನ್ನು ಕೊಂದು ಥಾಯ್ ವ್ಯಕ್ತಿ ತನ್ನನ್ನು ಗುಂಡಿಕ್ಕಿ ಹತ್ಯೆ ಮಾಡಿಕೊಂಡ ಘಟನೆ ಹೊಸವರ್ಷಾಚರಣೆ ಪಾರ್ಟಿ ವೇಳೆ ಬ್ಯಾಂಕಾಕ್ ನಲ್ಲಿ ನಡೆದಿದೆ.
ಬ್ಯಾಂಕಾಕ್ ನ ಚುಂಪೊನ್ ನ ದಕ್ಷಿಣ ಪ್ರಾಂತ್ಯದಲ್ಲಿ ಸುಚೀಪ್ ಸೊರ್ನ್ ಸಂಗ್ ತನ್ನ ಪತ್ನಿ ಹಾಗೂ ಕುಟುಂಬದವರ ಜೊತೆಗೂಡಿ ಮಧ್ಯರಾತ್ರಿ ಪಾರ್ಟಿ ಮಾಡಲು ಆರಂಭಿಸಿ ಕೆಲವೇ ಸಮಯದ ನಂತರ ಈ ಘಟನೆ ನಡೆದಿದೆ.
ಸುಚೀಪ್ ಸೊರ್ನ್ ಸಂಗ್ ಕುಟುಂಬ ಇಲ್ಲಿನ ಫಾಟೊ ಜಿಲ್ಲೆಯ ಬ್ಯೂಟಿ ಪಾರ್ಲರ್ ನಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಸಲಾಗಿತ್ತು. ಸುಚೀಪ್ ಸಾಕಷ್ಟು ಮದ್ಯ ಸೇವಿಸಿದ್ದ. ಅದೇ ಮತ್ತಿನಲ್ಲಿ ಪಿಸ್ತೂಲ್ ತೆಗೆದು ಶೂಟ್ ಮಾಡಿದ್ದಾನೆ. ಹತ್ಯೆಯಾದವರೆಲ್ಲರೂ ಆತನ ಕುಟುಂಬ ಸದಸ್ಯರೇ ಆಗಿದ್ದಾರೆ ಎಂದು ಲೆಫ್ಟಿನೆಂಟ್ ಕರ್ನಲ್ ಲಾರ್ಪ್ ಕಂಪಾಪನ್ ಪೊಲೀಸರಿಗೆ ತಿಳಿಸಿದ್ದಾರೆ.
ತಾನು ಅಳಿಯನಾಗಿದ್ದರೂ ತನ್ನ ಪತ್ನಿ ಕಡೆಯವರು ಸರಿಯಾಗಿ ಸ್ವಾಗತಿಸಲಿಲ್ಲ,ಮರ್ಯಾದೆ ಕೊಡಲಿಲ್ಲ ಎಂದು ಸಿಟ್ಟಿನಿಂದ ಮದ್ಯದ ನಶೆಯಲ್ಲಿ ಎಲ್ಲರ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


