ವಿದೇಶ

ಭಾರತದ ಹೊಡೆತಕ್ಕೆ ಪತರುಗುಟ್ಟಿದ ಪಾಕಿಸ್ತಾನ: ಯುದ್ಧ ಬೇಡವೆಂದು ದಯನೀಯ ಮನವಿ

ಹುಸಿಯಾದ ಚೀನಾ ಬೆಂಬಲದ ನಿರೀಕ್ಷೆ ಹಾಗೂ ಗಡಿಯಲ್ಲಿ ಭಾರತದ ಸೇನಾ ಸನ್ನದ್ಧತೆಗೆ ಪತರುಗುಟ್ಟಿರುವ ಪಾಕಿಸ್ತಾನ ಈಗ ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಹೇಳಿದೆ.

ಭಾರತದ ಹೊಡೆತಕ್ಕೆ ಪತರುಗುಟ್ಟಿದ ಪಾಕಿಸ್ತಾನ: ಯುದ್ಧ ಬೇಡವೆಂದು ದಯನೀಯ ಮನವಿ
ಭಾರತದ ಹೊಡೆತಕ್ಕೆ ಪತರುಗುಟ್ಟಿದ ಪಾಕಿಸ್ತಾನ: ಯುದ್ಧ ಬೇಡವೆಂದು ದಯನೀಯ ಮನವಿ
Published On :
ಇಸ್ಲಾಮಾಬಾದ್: ಹುಸಿಯಾದ ಚೀನಾ ಬೆಂಬಲದ ನಿರೀಕ್ಷೆ ಹಾಗೂ ಗಡಿಯಲ್ಲಿ ಭಾರತದ ಸೇನಾ ಸನ್ನದ್ಧತೆಗೆ ಪತರುಗುಟ್ಟಿರುವ ಪಾಕಿಸ್ತಾನ ಈಗ ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಹೇಳಿದೆ.
ಇಷ್ಟೆಲ್ಲಾ ಆದರೂ ತನ್ನ ಧಿಮಾಕನ್ನು ಬಿಡದ ಪಾಕಿಸ್ತಾನದ ಸೇನೆ ತಾನು ಬಯಸಿದ್ದರೆ ನಾಗರಿಕರ ಹತ್ಯೆಯಾಗುವಂತೆ ಟಾರ್ಗೆಟ್ ಮಾಡಿ ದಾಳಿ ನಡೆಸಬಹುದಾಗಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ ಎಂದು ಐಎಸ್ ಪಿ ಆರ್ ಮುಖ್ಯಸ್ಥ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತದ ವಾಯುಗಡಿಯ ಉಲ್ಲಂಘಿಸಿದ ಬೆನ್ನಲ್ಲೆ ಪಾಕಿಸ್ತಾನದ ಎಫ್-16 ನ್ನು ಭಾರತ ಹೊಡೆದುರುಳಿಸಿದ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಚೀನಾ ಸಹ ಶಾಕ್ ನೀಡಿ, ಪಾಕಿಸ್ತಾನ ಮೊದಲು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಬೆನ್ನಲ್ಲೇ ಪಾಕಿಸ್ತಾನ ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಪಾಕಿಸ್ತಾನದ ಸೇನೆಯ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನ ಜವಾಬ್ದಾರಿಯುತ ರಾಷ್ಟ್ರವಾಗಿದ್ದು ಶಾಂತಿ ಬಯಸುತ್ತದೆ. ಪಾಕಿಸ್ತಾನ ತನ್ನ ಸಾಮರ್ಥ್ಯವನ್ನು ತೋರಿಸಲು ಎಫ್-16 ವಿಮಾನ ಬಳಕೆ ಮಾಡಿತ್ತು. ಪಾಕಿಸ್ತಾನ ಯುದ್ಧ ಬಯಸುತ್ತಿಲ್ಲ, ನಮಗೆ ಶಾಂತಿ ಬೇಕಾಗಿದೆ ಎಂದು ಪಾಕಿಸ್ತಾನದ ಜನರಲ್ ಘಫೂರ್ ಹೇಳಿದ್ದಾರೆ.
ಯುದ್ಧ ನೀತಿಗಳು ವಿಫಲವಾದಾಗ ಸಂಭವಿಸುವಂಥಹದ್ದು ಇದನ್ನು ಭಾರತ ಅರ್ಥಮಾಡಿಕೊಳ್ಳಬೇಕಿದೆ, ಯುದ್ಧವನ್ನು ಪ್ರಾರಂಭಿಸುವುದು ಸುಲಭ ಆದರೆ ಮುಕ್ತಾಯಗೊಳಿಸುವುದಲ್ಲ, ಜಗತ್ತಿನಲ್ಲಿ ಯುದ್ಧದ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಪಾಕ್ ಸೇನೆಯ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.