ಪರಮಾಪ್ತ ಪಾಕಿಸ್ತಾನಕ್ಕೆ ಕೈಕೊಟ್ಟ ಚೀನಾ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು
ಪಾಕಿಸ್ತಾನವನ್ನು ಸಾರ್ವಕಾಲಿಕ ಪರಮಾಪ್ತ ರಾಷ್ಟ್ರ ಎಂದು ಗುರುತಿಸಿರುವ ಚೀನಾ, ಈಗ ತನ್ನ ಮಿತ್ರನಿಗೆ ಕೈಕೊಟ್ಟಿದೆ.

Published On :
ನವದೆಹಲಿ: ಪಾಕಿಸ್ತಾನವನ್ನು ಸಾರ್ವಕಾಲಿಕ ಪರಮಾಪ್ತ ರಾಷ್ಟ್ರ ಎಂದು ಗುರುತಿಸಿರುವ ಚೀನಾ, ಈಗ ತನ್ನ ಮಿತ್ರನಿಗೆ ಕೈಕೊಟ್ಟಿದೆ.
ಭಾರತ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದರ ಬಗ್ಗೆ ಪಾಕಿಸ್ತಾನವನ್ನು ಬೆಂಬಲಿಸದೇ ತಟಸ್ಥವಾಗಿ ಉಳಿದು ಶಾಕ್ ನೀಡಿದ್ದ ಚೀನಾ, ಈಗ ತನ್ನ ಆಪ್ತಮಿತ್ರ ರಾಷ್ಟ್ರಕ್ಕೆ ಮತ್ತೊಂದು ಶಾಕ್ ನೀಡಿದ್ದು, ಮೊದಲು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಸುಷ್ಮಾ ಸ್ವರಾಜ್ ಚೀನಾ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದರು, ಈಗ ಚೀನಾ ಸಹ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿ ಭಾರತದ ಹೇಳಿಕೆಗೆ ಧ್ವನಿಗೂಡಿಸಿರುವುದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಹಿನ್ನಡೆಯುಂಟಾಗುವುದಕ್ಕೆ ಕಾರಣವಾಗಿದ್ದು, ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಅಕ್ಷರಶಃ ಏಕಾಂಗಿಯಾಗಿದೆ.
ಭಾರತ ಫೆ.24 ರಂದು ರಾತ್ರಿ 3 ಗಂಟೆಗೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿಯನ್ನು ಬೇರಾವ ರಾಷ್ಟ್ರವೂ ಖಂಡಿಸದೇ ಇದ್ದರೂ ಸಹ ಚೀನಾ ಖಂಡಿಸುತ್ತದೆ ಎಂಬ ನಿರೀಕ್ಷೆ ಪಾಕಿಸ್ತಾನಕ್ಕೆ ಇತ್ತು, ಆದರೆ ಪಾಕ್ ಪಾಲಿಗೆ ಆ ನಿರೀಕ್ಷೆ ಸುಳ್ಳಾಗಿದ್ದು, ಈಗ ಪರಮಾಪ್ತ ಮಿತ್ರ ಚೀನಾ ಸಹ ಪಾಕಿಸ್ತಾನದ ಕೈಬಿಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


