ವಿದೇಶ

ಮಸೂದ್ ಅಝರ್ ಗೆ ಜಾಗತಿಕ ಉಗ್ರ ಪಟ್ಟ: ಭಾರತ ಒತ್ತಾಯಕ್ಕೆ ಮತ್ತೆ ಕ್ಯಾತೆ ತೆಗೆದ ಚೀನಾ!

ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದಮೇಲೆ ನಡೆದ ಉಗ್ರದಾಳಿಯ ರುವಾರಿ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಸಂಘಟನೆ ನಾಯಕ ಮಸೂದ್ ಅಝರ್....

ಮಸೂದ್ ಅಝರ್ ಗೆ ಜಾಗತಿಕ ಉಗ್ರ ಪಟ್ಟ: ಭಾರತ ಒತ್ತಾಯಕ್ಕೆ ಮತ್ತೆ ಕ್ಯಾತೆ ತೆಗೆದ ಚೀನಾ!
ಮಸೂದ್ ಅಝರ್ ಗೆ ಜಾಗತಿಕ ಉಗ್ರ ಪಟ್ಟ: ಭಾರತ ಒತ್ತಾಯಕ್ಕೆ ಮತ್ತೆ ಕ್ಯಾತೆ ತೆಗೆದ ಚೀನಾ!
Published On :
ಬೀಜಿಂಗ್: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದಮೇಲೆ ನಡೆದ ಉಗ್ರದಾಳಿಯ ರುವಾರಿ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್  ಸಂಘಟನೆ ನಾಯಕ ಮಸೂದ್ ಅಝರ್  ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ನಮ್ಮ ಬೆಂಬಲ ನೀಡುವುದಿಲ್ಲ ಎಂದು ಚೀನಾ ಹೇಳಿದೆ. ಈ ಮೂಲಕ ಭಾರತದ ಬೇಡಿಕೆಯನ್ನು ಚೀನಾ ತಿರಸ್ಕರಿಸಿದೆ.
ಭಯೋತ್ಪಾದನೆ ಕೃತ್ಯ ನಮಗೆ ಆಘಾತವನ್ನು ತಂದಿದೆ. ನಾವಿದನ್ನು ಖಂಡಿಸುತ್ತೇವೆ. ಎಲ್ಲಾ ಬಗೆಯ ಭಯೋತ್ಪಾದನಾ ಕೃತ್ಯಕ್ಕೆ ನಮ್ಮ ವಿರೋಧವಿದೆ ಎಂದು ನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುಯಾಂಗ್ ಹೇಳಿದ್ದಾರೆ.
ಇನ್ನು ಭಯೋತ್ಪಾದನೆಯನ್ನು ಮಟ್ಟ ಹಾಕಲು ಎಲಾ ದೇಶಗಳು ಕೈಜೋಡಿಸಲಿದೆ ಎಂದು ನಾವು ನಂಬಿದ್ದೇವೆ. ಜೆಇಎಂ ಹಾಗೂ ಮಸೂದ್ ಅಝರ್ ಜಾಗತಿಕ ಭಯೋತ್ಪಾದಕ ಹಾಗು ಜಾಗತಿಕ ಉಗ್ರ ಸಂಘಟನೆ ಎಂದುಘೋಷಿಸುವ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಹಾಗೆ ಮಾಡುವುದಕ್ಕೆ ಮುನ್ನ ನಾವು ಜವಾಬ್ದಾರಿಯುತ ನಿರ್ಧಾರಕ್ಕೆ ಬರಬೇಕಿದೆ ಎಂದು ಚೀನಾ ಹೇಳಿದೆ.
ವಿಶ್ವಸಂಸ್ಥೆಯಲ್ಲಿ ವಿಟೋ ಅಧಿಕಾರ ಹೊಂದಿರುವ ಚೀನಾ ಅಡ್ಡಿಯಿಂದಾಗಿ ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನ ಇದುವರೆಗೆ ಕೈಗೂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.