ಸಿಂಗಾಪುರ ಜಲಸಂಧಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ; 4 ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ
ವಿಶ್ವದಲ್ಲೇ ಅತಿ ಹೆಚ್ಚು ನೌಕಾ ಸಂಚಾರವಿರುವ ಸಿಂಗಾಪುರ ಜಲಸಂಧಿಯಲ್ಲಿ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮುಂದುವರೆದಿದ್ದು, ಕೇವಲ ನಾಲ್ಕು ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ ನಡೆಸಿದ್ದಾರೆ.

ಸಿಂಗಾಪುರ: ವಿಶ್ವದಲ್ಲೇ ಅತಿ ಹೆಚ್ಚು ನೌಕಾ ಸಂಚಾರವಿರುವ ಸಿಂಗಾಪುರ ಜಲಸಂಧಿಯಲ್ಲಿ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮುಂದುವರೆದಿದ್ದು, ಕೇವಲ ನಾಲ್ಕು ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ಸೋಮವಾರಯಷ್ಟೇ ಕಚ್ಚಾ ತೈಲ ಟ್ಯಾಂಕರ್ ವೊಂದರ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ್ದರು. ಈ ವೇಳೆ ಟ್ಯಾಂಕರ್ ನಲ್ಲಿ 105,000 ಟನ್ ಕಚ್ಛಾತೈಲವಿತ್ತು. ಇರಾಕ್ ನ ಬಸ್ರಾಹ್ ನಿಂದ ಕಚ್ಛಾ ತೈಲ ತುಂಬಿದ್ದ ಬಮ್ಜಿ ಎಂಬ ನೌಕೆ ಸಿಂಗಾಪುರ ಜಲಸಂಧಿ ಮಾರ್ಗವಾಗಿ ಚೀನಾ ಕಿಂಗ್ ಡಾವೋನತ್ತ ಚಲಿಸುತ್ತಿತ್ತು, ಈ ವೇಳೆ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ.
ಇದಾದ ಎರಡೇ ಗಂಟೆಯಲ್ಲಿ ಮತ್ತೂಂದು ನೌಕೆಯ ಮೇಲೆ ದಾಳಿ ನಡೆದಿದೆ. ಎರಡೂ ನೌಕೆಯಲ್ಲಿದ್ದ ಸಿಬಂದಿಯನ್ನು ಕಟ್ಟಿಹಾಕಿದ್ದ ಕಡಲ್ಗಳ್ಳರು, ದರೋಡೆಗೆ ಯತ್ನಿಸಿದ್ದರು. ಆದರೆ, ಹಡಗಿನಲ್ಲಿದ್ದ ಎಚ್ಚರಿಕೆಯ ಗಂಟೆ ಮೊಳಗಿದ ಕಾರಣ ಅವರ ಯತ್ನ ವಿಫಲವಾಗಿತ್ತು.
ಡಿ.20ರಂದು 3 ಕಡಲ್ಗಳ್ಳತನ ಘಟನೆ ನಡೆದಿತ್ತು. 2019ರಲ್ಲಿ ಸಿಂಗಾಪುರ ಜಲಸಂಧಿಯಲ್ಲಿ ಒಟ್ಟಾರೆ ಇಂತಹ 29 ಪ್ರಕರಣಗಳು ವರದಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


