ಪುರುಷರಿಗಿಂತ ಮಹಿಳೆಯರು ಉತ್ತಮ ನಾಯಕರು- ಒಬಾಮಾ
ಮಹಿಳೆಯರು ವಿಶ್ವದ ಪ್ರತಿಯೊಂದು ದೇಶವನ್ನು ನಡೆಸಿದರೆ ಜೀವನ ಮಟ್ಟ ಮತ್ತು ಫಲಿತಾಂಶಗಳಲ್ಲಿ ಸಾಮಾನ್ಯ ಸುಧಾರಣೆ ಕಂಡುಬರಲಿದೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಸಿಂಗಾಪುರ: ಮಹಿಳೆಯರು ವಿಶ್ವದ ಪ್ರತಿಯೊಂದು ದೇಶವನ್ನು ನಡೆಸಿದರೆ ಜೀವನ ಮಟ್ಟ ಮತ್ತು ಫಲಿತಾಂಶಗಳಲ್ಲಿ ಸಾಮಾನ್ಯ ಸುಧಾರಣೆ ಕಂಡುಬರಲಿದೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ಪರಿಪೂರ್ಣರಲ್ಲ, ಆದರೆ, ಪುರುಷರಿಗಿಂತ ವಿವಾದಕ್ಕೊಳಗಾದ ಉತ್ತಮ ನಾಯಕರಾಗಿದ್ದಾರೆ ಎಂದಿದ್ದಾರೆ
ಅಧಿಕಾರದ ಸ್ಥಾನಗಳನ್ನು ಹಿಡಿದಿಟ್ಟುಕೊಳ್ಳಲು ವಿಶ್ವದಲ್ಲಿ ಬಹುತೇಕ ಸಮಸ್ಯೆಗಳು ಹಳೆಯ ಜನರು ಹಾಗೂ ಬಹುತೇಕ ಪುರುಷರಿಂದಲೇ ಬರುತ್ತವೆ ಎಂದು ಅಭಿಪ್ರಾಯಪಟ್ಟರು. ರಾಜಕೀಯ ಧ್ರುವೀಕರಣ ಮತ್ತು ಸುಳ್ಳುಗಳನ್ನು ಹರಡಲು ಸಾಮಾಜಿಕ ಮಾಧ್ಯಮ ಬಳಸುವುದರ ಬಗ್ಗೆಯೂ ಅವರು ಮಾತನಾಡಿದರು.
ಇಂದು ಮಹಿಳೆಯರು ಪರಿಪೂರ್ಣರಲ್ಲ, ಆದರೆ, ಪುರುಷರಿಗಿಂತ ನೀವು ಅತ್ಯುತ್ತಮ ನಾಯಕರು ಎಂಬುದನ್ನು ನಿರ್ವಿವಾದವಾಗಿ ಹೇಳುತ್ತೇನೆ. ಎರಡು ವರ್ಷಗಳ ಕಾಲ ಭೂಮಿಯ ಮೇಲಿನ ಪ್ರತಿಯೊಂದು ರಾಷ್ಟ್ರವು ಮಹಿಳೆಯರಿಂದ ನಡೆಸಲ್ಪಡುತ್ತಿದ್ದರೆ, ನೀವು ಎಲ್ಲದರ ಬಗ್ಗೆ ಗಮನಾರ್ಹ ಸುಧಾರಣೆಯನ್ನು ಕಾಣುತ್ತೀರಿ, ಜೀವನ ಮಟ್ಟಗಳು ಮತ್ತು ಫಲಿತಾಂಶಗಳು ಕೂಡಾ ಸಕಾರಾತ್ಮಕವಾಗಿ ಹೊರಹೊಮ್ಮಲಿವೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


