ಪಾಕಿಸ್ತಾನದಿಂದ ಮತ್ತೆ ಹಗೆತನ; ಭಾರತಕ್ಕೆ ವಾಯುಮಾರ್ಗ, ಭೂಮಾರ್ಗ ಸಂಚಾರ ನಿರ್ಬಂಧ?
ಭಾರತೀಯ ವಿಮಾನಗಳು ತನ್ನ ವಾಯುಮಾರ್ಗವನ್ನು ಬಳಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ಚಿಂತಿಸುತ್ತಿದೆ.

ಇಸ್ಲಾಮಾಬಾದ್: ಭಾರತೀಯ ವಿಮಾನಗಳು ತನ್ನ ವಾಯುಮಾರ್ಗವನ್ನು ಬಳಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ಚಿಂತಿಸುತ್ತಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ತೆಗೆದುಹಾಕಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ನಿನ್ನೆ ಈ ಕುರಿತು ಮಾತನಾಡಿದ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಫವದ್ ಚೌಧರಿ, ಭಾರತ-ಆಫ್ಘನ್ ನಡುವೆ ವ್ಯಾಪಾರ ಉದ್ಯಮಕ್ಕೆ ಬಳಸುತ್ತಿರುವ ಪಾಕಿಸ್ತಾನ ಭೂ ಮಾರ್ಗ ಸಂಚಾರಕ್ಕೆ ಕೂಡ ನಿಷೇಧ ಹೇರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಭಾರತಕ್ಕೆ ಪಾಕಿಸ್ತಾನದ ವಾಯುಮಾರ್ಗವನ್ನು ಮತ್ತು ಆಫ್ಘಾನಿಸ್ತಾನದೊಂದಿಗೆ ಭಾರತದ ವ್ಯಾಪಾರಕ್ಕೆ ಬಳಸುತ್ತಿರುವ ಭೂ ಮಾರ್ಗಕ್ಕೆ ಸಹ ಸಂಪೂರ್ಣ ನಿರ್ಬಂಧ ಹೇರಲು ಪ್ರಧಾನಿಗಳು ಯೋಚಿಸುತ್ತಿದ್ದಾರೆ, ಈ ಕುರಿತು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಂದ ಸಹ ಅಭಿಪ್ರಾಯಗಳು ಬಂದಿದ್ದು ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಇರುವ ಕಾನೂನು ವಿಚಾರಗಳನ್ನು ಪರಿಗಣಿಸಲಾಗುತ್ತಿದೆ ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.
ಕಳೆದ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರ ತಾಣದ ಮೇಲೆ ಭಾರತೀಯ ಯುದ್ಧ ವಿಮಾನ ವಾಯುದಾಳಿ ನಡೆಸಿದ ಬಳಿಕ ಫೆಬ್ರವರಿ 26ರಂದು ಪಾಕಿಸ್ತಾನ ಭಾರತಕ್ಕೆ ತನ್ನ ವಾಯುಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿತ್ತು.
ನಂತರ ಕಳೆದ ಜುಲೈ 16ರಂದು ಎಲ್ಲಾ ನಾಗರಿಕ ವಿಮಾನಗಳ ಸಂಚಾರಕ್ಕೆ ತನ್ನ ವಾಯುನೆಲೆಯನ್ನು ಪಾಕಿಸ್ತಾನ ತೆರೆದಿತ್ತು. ಏರ್ ಇಂಡಿಯಾದ ಸುಮಾರು 50 ವಿಮಾನಗಳು ಪ್ರತಿದಿನ ಪಾಕಿಸ್ತಾನ ವಾಯುಮಾರ್ಗದ ಮೂಲಕ ಹಾರಾಟ ನಡೆಸುತ್ತದೆ. ಅಮೆರಿಕಾ, ಯುರೋಪ್ ಮತ್ತು ಮಧ್ಯ ಪ್ರಾಚ್ಯಕ್ಕೆ ಹೋಗುವ ವಿಮಾನಗಳು ಪಾಕಿಸ್ತಾನ ವಾಯುಮಾರ್ಗದ ಮೂಲಕವೇ ಹಾರಾಟ ಮಾಡುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


