ದ.ಕೊರಿಯಾ: ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಿದ್ದ ಪಾಕಿಗಳ ಬೆವರಿಳಿಸಿದ ಶಾಜಿಯಾ ಇಲ್ಮಿ, ವಿಡಿಯೋ!
ಆರ್ಟಿಕಲ್ 370 ರದ್ದು ಬಳಿಕ ಪಾಕಿಗಳು ರೊಚ್ಚಿಗೆದ್ದಿದ್ದಾರೆ. ಹೌದು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಪ್ರತಿಭಟನೆ ವೇಳೆ ಕೆಲ ಪಾಕಿಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಆಗ ಅಲ್ಲಿಗೆ...

ಸಿಯೋಲ್(ದಕ್ಷಿಣ ಕೊರಿಯಾ): ಆರ್ಟಿಕಲ್ 370 ರದ್ದು ಬಳಿಕ ಪಾಕಿಗಳು ರೊಚ್ಚಿಗೆದ್ದಿದ್ದಾರೆ. ಹೌದು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಪ್ರತಿಭಟನೆ ವೇಳೆ ಕೆಲ ಪಾಕಿಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಆಗ ಅಲ್ಲಿಗೆ ಎಂಟ್ರಿ ಕೊಟ್ಟ ಶಾಜಿಯಾ ಇಲ್ಮಿ ಮೋದಿ ವಿರುದ್ಧ ಘೋಷಣೆ ಕೂಗದಂತೆ ಧಮ್ಕಿ ಹಾಕಿದ್ದು ಅಲ್ಲದೆ ಇಂಡಿಯಾ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಗ್ಲೋಬಲ್ ಸಿಟಿಜನ್ ಫೋರಂ ನಿಯೋಗದೊಂದಿಗೆ ಯುನೈಟೆಡ್ ಫೀಸ್ ಫೆಡರೇಶನ್ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಸಮ್ಮೇಳನ ಮುಗಿಸಿಕೊಂಡು ಭಾರತದ ರಾಯಭಾರಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಕೆಲ ಪಾಕಿಗಳು ಶಾಜಿಯಾ ಹಾಗೂ ಇತರ ಭಾರತೀಯರನ್ನು ಸುತ್ತುವರೆದರು.
ಈ ವೇಳೆ ಪಾಕಿಗಳನ್ನು ತರಾಟೆಗೆ ತೆಗೆದುಕೊಂಡ ಶಾಜಿಯಾ, ಮತ್ತೊಂದು ದೇಶದ ನೆಲದಲ್ಲಿ ನಿಂತು ಇನ್ನೊಂದು ದೇಶ ಹಾಗೂ ಅದರ ಮುಖ್ಯಸ್ಥರ ವಿರುದ್ಧ ಘೋಷಣೆ ಕೂಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಆಗ ಅಲ್ಲಿದ್ದ ಪಾಕಿಗಳು ಜೋರಾಗಿ ಭಾರತದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ಆಗ ಶಾಜಿಯಾ ಏಕಾಂಗಿಯಾಗಿ ಇಂಡಿಯಾ ಜಿಂದಾಬಾದ್ ಎಂದು ಘೋಷಣೆ ಕೂಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


