ಗ್ರೇಸ್ 1 ಟ್ಯಾಂಕರ್ ಬಿಡುಗಡೆ ಖಚಿತ ಪಡಿಸಿದ ರಾಯಭಾರಿ
ಒಂದು ತಿಂಗಳ ಹಿಂದೆ ಜಿಬ್ರಾಲ್ಟರ್ ನಲ್ಲಿ ವಶಕ್ಕೆ ಪಡೆದಿದ್ದ ಇರಾನಿನ ತೈಲವನ್ನು ಹೊತ್ತ ಗ್ರೇಸ್ 1 ಟ್ಯಾಂಕರ್ ನ್ನು ಬ್ರಿಟನ್ ನ ಇರಾನ್ ರಾಯಭಾರಿ ಹಮೀದ್ ಬೈದಿನೆಜಾದ್ ಅವರು ಗುರುವಾರ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.

ಟೆಹರಾನ್: ಒಂದು ತಿಂಗಳ ಹಿಂದೆ ಜಿಬ್ರಾಲ್ಟರ್ ನಲ್ಲಿ ವಶಕ್ಕೆ ಪಡೆದಿದ್ದ ಇರಾನಿನ ತೈಲವನ್ನು ಹೊತ್ತ ಗ್ರೇಸ್ 1 ಟ್ಯಾಂಕರ್ ನ್ನು ಬ್ರಿಟನ್ ನ ಇರಾನ್ ರಾಯಭಾರಿ ಹಮೀದ್ ಬೈದಿನೆಜಾದ್ ಅವರು ಗುರುವಾರ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ವಶಕ್ಕೆ ಪಡೆದ ಟ್ಯಾಂಕರ್ ನ್ನು ಜಿಬ್ರಾಲ್ಟರ್ ಅಧಿಕಾರಿಗಳ ಮತ್ತು ನ್ಯಾಯಾಲಯದಿಂದ ನಂತರ, ಇರಾನಿನ ತೈಲದೊಂದಿಗೆ ಅಕ್ರಮವಾಗಿ ಬಂಧನಕ್ಕೊಳಗಾದ ಟ್ಯಾಂಕರ್ ಅನ್ನು ಬಿಡುಗಡೆ ಮಾಡಲಾಗಿದೆ "ಎಂದು ಬೈದಿನೆಜಾದ್ ತಮ್ಮ ಟ್ವಿಟ್ಟರ್ ಬ್ಲಾಗ್ ನಲ್ಲಿ ಬರೆದಿದ್ದಾರೆ.
ಬ್ರಿಟನ್‌ಗೆ ಕೆಲವು ದಾಖಲೆಗಳನ್ನು ಸಲ್ಲಿಸಲಾಗಿದ್ದು, ತನ್ನ ಗ್ರೇಸ್ ೧ ತೈಲ ಟ್ಯಾಂಕರನ್ನು ಅದು ಶೀಘ್ರವೇ ಬಿಡುಗಡೆ ಮಾಡಬಹುದಾಗಿದೆ ಎಂದು ಇರಾನ್ ಹೇಳಿದೆ. ಕೆಲವು ದಾಖಲೆಗಳನ್ನು ನೀಡಿದ ಬಳಿಕ, ಇರಾನ್‌ನ ತೈಲ ಟ್ಯಾಂಕರ್ ಗ್ರೇಸ್ 1ನ್ನು ಬಿಡುಗಡೆ ಮಾಡಲು ಬ್ರಿಟನ್ ಉತ್ಸುಕವಾಗಿದೆ. ಟ್ಯಾಂಕರ್ ನ ಬಿಡುಗಡೆ ಶೀಘ್ರವೇ ಆಗುತ್ತದೆ ಎಂದು ಆಶಿಸುತ್ತೇವೆ ಎಂದು ಇರಾನ್‌ನ ಬಂದರು ಮತ್ತು ಸಾಗರ ತೀರ ಇಲಾಖೆಯ ಉಪ ಮುಖ್ಯಸ್ಥ ಜಲೀಲ್ ಇಸ್ಲಾಮಿ ಹೇಳಿದ್ದಾರೆ ಎಂದು ಇರ್ನ ಸುದ್ದಿ ಸಂಸ್ಥೆ ತಿಳಿಸಿದೆ.
ಅಲ್ಲದೆ ಟ್ಯಾಂಕರ್ ನಲ್ಲಿದ್ದ ಭಾರತೀಯ ಮೂಲದ ಸಿಬ್ಬಂದಿಗಳೂ ಸೇರಿದಂತೆ ಎಲ್ಲ ಸಿಬ್ಬಂದಿಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ರಿಟನ್‌ನ ಮೆಡಿಟರೇನಿಯನ್ ಭೂಭಾಗ ಜಿಬ್ರಾಲ್ಟರ್‌ನ ಕರಾವಳಿಯಲ್ಲಿ ಬ್ರಿಟಿಷ್ ರಾಯಲ್ ನೌಕಾಪಡೆಯ ಸೈನಿಕರು ಜುಲೈ 4 ರಂದು ಸಿರಿಯಾಕ್ಕೆ ತೈಲ ಸಾಗಿಸುವ ಮೂಲಕ ಐರೋಪ್ಯ ಒಕ್ಕೂಟದ ದಿಗ್ಭಂಧನಗಳನ್ನು ಇರಾನ್ ಉಲ್ಲಂಘಿಸುತ್ತಿದೆ ಎಂಬ ಶಂಕೆಯಲ್ಲಿ ಇರಾನ್ ನ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


