ತಿರುಗು ಬಾಣವಾಯ್ತು ಭಾರತದ ಮೇಲಿನ ದ್ವೇಷ: ಟೊಮಾಟೊಗೂ ಕಣ್ಣೀರು ಹಾಕುವ ಸ್ಥಿತಿ ಪಾಕ್ ಜನತೆಯದ್ದು!
ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಹತಾಶಗೊಂಡು ಪಾಕಿಸ್ತಾನ ಭಾರತದೊಂದಿಗಿನ ವಾಣಿಜ್ಯ-ವ್ಯಾಪಾರಗಳನ್ನು ರದ್ದುಗೊಳಿಸಿದೆ. ಈಗ ಅದರ ಪರಿಣಾಮ ಪಾಕಿಸ್ತಾನಕ್ಕೆ ಗೋಚರವಾಗುತ್ತಿದೆ.

ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಹತಾಶಗೊಂಡು ಪಾಕಿಸ್ತಾನ ಭಾರತದೊಂದಿಗಿನ ವಾಣಿಜ್ಯ-ವ್ಯಾಪಾರಗಳನ್ನು ರದ್ದುಗೊಳಿಸಿದೆ. ಈಗ ಅದರ ಪರಿಣಾಮ ಪಾಕಿಸ್ತಾನಕ್ಕೆ ಗೋಚರವಾಗುತ್ತಿದೆ.
ಭಾರತದ ವಿರುದ್ಧ ಅಬ್ಬರಿಸಿ ವ್ಯಾಪಾರ ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಈಗ ತನ್ನ ತಪ್ಪಿಗೆ ಕಣ್ಣೀರು ಹಾಕುವ ಪರಿಸ್ಥಿತಿ ಎದುರಿಸುತ್ತಿದೆ. ಬೇರೆಲ್ಲಾ ಪ್ರದೇಶಗಳಲ್ಲಿ ಈರುಳ್ಳಿ ಖರೀದಿಸುವಾಗ, ಕತ್ತರಿಸುವಾಗ ಕಣ್ಣೀರು ಬಂದರೆ, ಪಾಕಿಸ್ತಾನದ ಜನತೆ ಟೊಮಾಟೋ ಖರೀದಿಸುವುದಕ್ಕೂ ಕಣ್ಣೀರಿಡುತ್ತಿದ್ದಾರೆ.
ರೋಟಿ, ನಾನ್ ಬೆಲೆಯೂ ಏರಿಕೆಯಾಗತೊಡಗಿದ್ದು ಈ ನಡುವೆ ಟೊಮಾಟೋ ದರ ಸಹ ಹೆಚ್ಚಿದೆ. ಪ್ರತಿ ಕೆ.ಜಿ ಟೊಮಾಟೊ ಬೆಲೆ 300 ರೂಪಾಯಿ ಆಗಿದ್ದು, ಇದರೊಟ್ಟಿಗೆ ಈರುಳ್ಳಿ, ಸೇರಿದಂತೆ ಹಸಿ ತರಕಾರಿಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಈ ಎಲ್ಲಾ ವಸ್ತುಗಳನ್ನು ಪಾಕಿಸ್ತಾನ ಭಾರತದಿಂದ ಆಮದು ಮಾಡಿಕೊಳ್ಳುತ್ತಿತ್ತು. ಈಗ ಭಾರತದೊಂದಿಗಿನ ವಾಣಿಜ್ಯ-ವ್ಯಾಪಾರಗಳನ್ನು ಕಡಿದುಕೊಂಡಿರುವುದರಿಂದ ಬೆಲೆ ಗಗನಕ್ಕೇರಿದೆ. ಈಗಾಗಲೇ ಆರ್ಥಿಕವಾಗಿ ತೀವ್ರವಾಗಿ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ತಾನೇ ಮಾಡಿಕೊಂಡ ಈ ತಪ್ಪಿನಿಂದ ಬಲವಾದ ಪೆಟ್ಟು ಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


