ವಿದೇಶ

ಈಸ್ಟರ್ ಸಂಡೇ ದಿನ ಶ್ರೀಲಂಕಾ ಚರ್ಚ್, ಹೋಟೆಲ್ ಮೇಲೆ ಬಾಂಬ್ ದಾಳಿ: 137 ಸಾವು, 300 ಜನರಿಗೆ ಗಾಯ

ಈಸ್ಟರ್ ಭಾನುವಾರದ ದಿನವಾದ ಇಂದು (ಏ. 21)ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಮೂರು ಹೋಟೆಲ್ ಗಳಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 137 ಕ್ಕೂ ಹೆಚ್ಚಿನ ಜನರು ಸತ್ತು 300 ಮಂದಿ ಗಾಯಗೊಂಡಿದ್ದಾರೆ

ಈಸ್ಟರ್ ಸಂಡೇ ದಿನ ಶ್ರೀಲಂಕಾ ಚರ್ಚ್, ಹೋಟೆಲ್ ಮೇಲೆ ಬಾಂಬ್ ದಾಳಿ:  137 ಸಾವು, 300  ಜನರಿಗೆ ಗಾಯ
ಸಂಗ್ರಹ ಚಿತ್ರ
Published On :
ಕೊಲಂಬೋ: ಈಸ್ಟರ್ ಭಾನುವಾರದ ದಿನವಾದ ಇಂದು (ಏ. 21)ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಮೂರು ಹೋಟೆಲ್ ಗಳಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ  137ಕ್ಕೂ ಹೆಚ್ಚಿನ ಜನರು ಸತ್ತು 300  ಮಂದಿ ಗಾಯಗೊಂಡಿದ್ದಾರೆ 
ಈಸ್ಟರ್ ಭಾನುವಾರದ ದಿನ ಚರ್ಚ್ ಹ್ಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ಸ್ಥಳೀಯ ಕಾಲಮಾನ ಬೆಳಿಗ್ಗೆ 8.45ರ ಸುಮಾರು ಸ್ಫೋಟ ಸಂಭವಿಸಿದೆ ಎಂದು ಪೋಲೀಸ್ ವಕ್ತಾರ ರುವಾನ್ ಗುಣಶೇಖರ ಹೇಳಿದ್ದಾರೆ.
ಕೊಲೊಂಬೊದಲ್ಲಿನ ಸೇಂಟ್ ಅಂತೋನಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದಲ್ಲಿರುವ ಮತ್ತೊಂದು ಚರ್ಚ್ನಲ್ಲಿ ಸ್ಪೋಟ ಸಂಬವಿಸಿದೆ. ಅಲ್ಲದೆ ಪಂಚತಾರಾ ಹೋಟೆಲುಗಳಾದ  ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್ ಮತ್ತು ಕಿಂಗ್ಸ್ ಬರಿ ಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲಾಗಿದೆ.
ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಯ ವಕ್ತಾರ ಡಾ. ಸಮ್ಮಿದಿ ಸಮರಕೂನ್, ಹೇಳಿದಂತೆ ಸುಮಾರು 280 ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದೆ.
"ನಮ್ಮ ಚರ್ಚ್ ಗಳ ಮೇಲೆ ಬಾಂಬ್ ದಾಳಿಯಾಗಿದೆ, ದಯಮಾಡಿ ಬಂದು ಸಹಾಯ ಮಾಡಿ" ಎಂದು ಪಶ್ಚಿಮದ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿನ ಸೇಂಟ್ ಸೆಬಾಶಿಷಿಯನ್ ಚರ್ಚ್ ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.