ಶ್ರೀಲಂಕಾದಲ್ಲಿ ನರಮೇಧ: ಬಾಂಬ್ ಸ್ಫೋಟದಲ್ಲಿ 207 ಸಾವು, 400 ಮಂದಿಗೆ ಗಾಯ
ಕ್ರಿಶ್ಚಿಯನ್ನರ ಪವಿತ್ರ ದಿನವಾದ ಇಂದು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಕ್ತದೋಕುಳಿ ಹರಿದಿದೆ.ಎಂಟು ಕಡೆ ನಡೆದ ಆತ್ಮಾಹುತಿ ಬಾಂಬರ್ ದಾಳಿಯಿಂದಾಗಿ 35 ವಿದೇಶಿಯರು ಸೇರಿದಂತೆ 207 ಜನರು ಮೃತಪಟ್ಟಿದ್ದಾರೆ.

ಕೊಲಂಬೊ: ಕ್ರಿಶ್ಚಿಯನ್ನರ ಪವಿತ್ರ ದಿನವಾದ ಇಂದು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಕ್ತದೋಕುಳಿ ಹರಿದಿದೆ.ಎಂಟು ಕಡೆ ನಡೆದ ಆತ್ಮಾಹುತಿ ಬಾಂಬರ್ ದಾಳಿಯಿಂದಾಗಿ 35 ವಿದೇಶಿಯರು ಸೇರಿದಂತೆ 207 ಜನರು ಮೃತಪಟ್ಟಿದ್ದಾರೆ. 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ನ್ಯೂಸ್ ಏಜೆನ್ಸಿ ಎಎಫ್ ಪಿ ವರದಿ ಮಾಡಿದೆ.
ಬಹುತೇಕ ಆತ್ಮಾಹುತಿ ಬಾಂಬರ್ ದಾಳಿಯಾಗಿದ್ದು, ಈ ದಾಳಿಯ ಹಿಂದೆ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಏಳು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ತಿಳಿಸಿದ್ದಾರೆ.
ಕೊಲಂಬೊದಲ್ಲಿನ ಮೂರು ಹೋಟೆಲ್ ಹಾಗೂ ಚರ್ಚ್ ನಲ್ಲಿ ಮೊದಲ ಬಾಂಬ್ ಸ್ಟೋಟಿಸಿದ್ದರೆ, ಕೊಲಂಬೊ ಹೊರವಲಯದಲ್ಲಿನ ಇನ್ನಿತರ ಎರಡು ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದಾಗ ಬಾಂಬ್ ಸ್ಟೋಟಿಸಿದೆ. ತದನಂತರ ದಾಹಿವಾಲಾದಲ್ಲಿನ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದಲ್ಲಿನ ಎದುರುಗಡೆಯ ಹೋಟೆಲ್ ನಲ್ಲಿ ಮತ್ತೊಂದು ಬಾಂಬ್ ಸ್ಟೋಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಬೆಳಗ್ಗೆ 8-45 ರ ಸುಮಾರಿನಲ್ಲಿ ಬಾಂಬ್ ಸ್ಟೋಟಿಸಿದ್ದು, ಆದರೆ, ಈವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


