ಇಸ್ರೇಲ್ ಚುನಾವಣೆ: ಮತ್ತೆ ನೆತನ್ಯಾಹು ಆಯ್ಕೆಗೆ ಎದುರಾಳಿ ಹಮಾಸ್ ಹೇಳಿದ್ದೇನು?
ದಾಖಲೆಯ ಸತತ 5ನೇ ಬಾರಿಗೆ ನೆತನ್ಯಾಹು ಅವರ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಈ ಕುರಿತು ಇಸ್ರೇಲ್ ಎದುರಾಳಿ ಹಮಾಸ್ ಸಂಘಟನೆ ಕೂಡ ಪ್ರತಿಕ್ರಿಯೆ ನೀಡಿದೆ.

Published On :
ಪ್ಯಾಲೆಸ್ತೀನ್: ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಇಸ್ರೇಲ್ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಜಯಭೇರಿ ಭಾರಿಸಿದ್ದು, ದಾಖಲೆಯ ಸತತ 5ನೇ ಬಾರಿಗೆ ನೆತನ್ಯಾಹು ಅವರ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಈ ಕುರಿತು ಇಸ್ರೇಲ್ ಎದುರಾಳಿ ಹಮಾಸ್ ಕೂಡ ಪ್ರತಿಕ್ರಿಯೆ ನೀಡಿದೆ.
ಇಸ್ರೇಲ್ ಚುನಾವಣೆಯನ್ನು ಕುತೂಹಲದಿಂದ ನೋಡುತ್ತಿದ್ದ ಹಮಾಸ್, ಚುನಾವಣಾ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿದ್ದು, ನೆತನ್ಯಾಹು ಆಯ್ಕೆಯನ್ನು ಅಸಂಬದ್ಧ ಎಂದು ಹೇಳಿದೆ. ಈ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಹಮಾಸ್ ಸರ್ಕಾರ, ಇಸ್ರೇಲ್ ನಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಯೋಜನವಿಲ್ಲ. ಶಾಂತಿ ಮಾತುಕತೆಯಲ್ಲಿ ನಂಬಿಕೆ ಇರದ ಯಾವುದೇ ಪಕ್ಷ ಅಧಿಕಾರ ರಚನೆ ಮಾಡಿದರೂ ಅದು ಹಾಲಿ ಪರಿಸ್ಥಿತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಸ್ರೇಲ್ ನ ಎಲ್ಲ ರಾಜಕೀಯ ಪಕ್ಷಗಳೂ ಒಂದೇ.. ಗಾಜಾ ಮೇಲೆ ನಿಯಂತ್ರಣ ಸಾಧಿಸುವುದೇ ಅವರ ಗುರಿ ಎಂದು ವ್ಯಂಗ್ಯವಾಗಿ ಹೇಳಿದೆ.
ಇದೇ ರೀತಿಯ ಪ್ರತಿಕ್ರಿಯೆಯನ್ನು ಪ್ಯಾಲೆಸ್ತೀನ್ ಉಗ್ರ ಸಂಘಟನೆ ಹಮಾಸ್ ಮುಖ್ಯಸ್ಥ ಖಲೀಲ್ ಅಲ್ ಹಯ್ಯಾ ಕೂಡ ಹೇಳಿದ್ದು, ಇಸ್ರೇಲ್ ಚುನಾವಣಾ ಫಲಿತಾಂಶಕ್ಕೆ ನಮ್ಮ ಪ್ರತಿಕ್ರಿಯೆ ಅಸಂಬದ್ಧ.. ಅಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರ ಗುರಿ ಗಾಜಾ ಪಟ್ಟಿ ಮೇಲಿನ ನಿಯಂತ್ರಣವಾಗಿರುತ್ತದೆ. ಆದರೆ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಇಸ್ರೇಲ್ ನ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ನಾಣ್ಯದ ಮುಖಗಳಿದ್ದಂತೆ. ಅವರ ಗುರಿ ಕೇವಲ ಗಾಜಾ ಪಟ್ಟಿಯಾಗಿರುತ್ತದೆ. ಹೀಗಾಗಿ ನಾವು ನಮ್ಮ ಹೋರಾಟ ಮುಂದುವರೆಸಲಿದ್ದು, ಇಸ್ರೇಲ್ ಆಕ್ರಮಿತ ಪ್ರದೇಶವನ್ನು ಸ್ವತಂತ್ರಗೊಳಿಸಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಸಾಧಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಶಾಂತಿಯಲ್ಲಿ ನಂಬಿಕೆ ಇರದ ಯಾವುದೇ ಸರ್ಕಾರ ನಮಗೆ ಬೇಕಿಲ್ಲ ಎಂದೂ ಹಯ್ಯಾ ಖಡಕ್ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Palestineಪ್ಯಾಲೆಸ್ತೀನ್Hamasಹಮಾಸ್Benjamin Netanyahuಬೆಂಜಮಿನ್ ನೆತನ್ಯಾಹುಇಸ್ರೇಲ್ ಚುನಾವಣೆKnesset electionIsreal Electionಕ್ನೆಸೆಟ್ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


