ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಗಾಯಕಿಯ ಎದೆ ಮುಟ್ಟಿ ನಂತರ ಕ್ಷಮೆ ಕೋರಿದ ಬಿಷಪ್!
ಅಮೆರಿಕದ ಖ್ಯಾತ ಗಾಯಕಿ ಅರಿಯಾನ ಗ್ರಾಂಡೆ ಅವರ ಎದೆಯನ್ನು ಮುಟ್ಟಿ ಖಂಡನೆಗೆ ಗುರಿಯಾಗಿದ್ದ ಬಿಷಪ್ ಮೂರನೇ ಚಾರ್ಲ್ಸ್ ಎಚ್. ಎಲ್ಲಿಸ್ ಅವರು ಇದೀಗ...

Published On :
ವಾಷಿಂಗ್ಟನ್: ಅಮೆರಿಕದ ಖ್ಯಾತ ಗಾಯಕಿ ಅರಿಯಾನ ಗ್ರಾಂಡೆ ಅವರ ಎದೆಯನ್ನು ಮುಟ್ಟಿ ಖಂಡನೆಗೆ ಗುರಿಯಾಗಿದ್ದ ಬಿಷಪ್ ಮೂರನೇ ಚಾರ್ಲ್ಸ್ ಎಚ್. ಎಲ್ಲಿಸ್ ಅವರು ಇದೀಗ ಗಾಯಕಿಯ ಕ್ಷಮೆ ಕೋರಿದ್ದಾರೆ.
ಅಮೆರಿಕದ ಖ್ಯಾತ ಗಾಯಕಿ ಅರೆತಾ ಫ್ರಾಂಕ್ಲಿನ್ ಅವರ ಅಂತ್ಯಕ್ರಿಯೆ ಡೆಟಾಯಿಟ್ ನ ಗ್ರೇಟರ್ ಗ್ರೇಸ್ ಚರ್ಚಿನಲ್ಲಿ ನಡೆದಿದ್ದು ಈ ವೇಳೆ ಅರೆತಾ ಅವರಿಗೆ ಶ್ರದ್ಧಾಂಜಲಿ ಸೂಚಕವಾಗಿ ಗಾಯಕಿ ಅರಿಯಾನ ಗ್ರಾಂಡೆ ಅವರು ಕೆಲವು ಹಾಡುಗಳನ್ನು ಹಾಡಿದರು.
ಈ ವೇಳೆ ಬಿಷಪ್ ಚಾರ್ಲ್ಸ್ ಅರವನ್ನು ವೇದಿಕೆಗೆ ತೀರ ಆತ್ಮೀಯವಾಗಿ ಬರಮಾಡಿಕೊಂಡರು. ಆ ಸಮಯದಲ್ಲಿ ಬೆನ್ನಿನ ಮೂಲಕ ಎದೆಯ ಭಾಗಕ್ಕೆ ಬಲಕೈ ಸೋಕಿಸಿ ಆಕೆಯನ್ನು ಅಭಿನಂದಿಸಿದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಹಿಳೆಯನ್ನು ಗೌರವಿಸಿ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಬಿಷಪ್ ಅವರ ನಡೆಯನ್ನು ಅನೇಕರು ತೀವ್ರವಾಗಿ ಖಂಡಿದ್ದರು.
ನಾನು ಆಕೆಯ ಎದೆಯ ಭಾಗವನ್ನು ಮುಟ್ಟುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೂ ಅರಿಯಾನ ವಿಷಯದಲ್ಲಿ ಮಿತಿ ಮೀರಿ ಆತ್ಮೀಯವಾಗಿ ವರ್ತಿಸಿದ್ದಕ್ಕಾಗಿ ಅವರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ಷಮೆಯಾಚನೆapologiaAriana GrandeBishopAretha FranklinCharles H Ellisಬಿಷಪ್ಅರಿಯಾನ ಗ್ರಾಂಡೆಅರೆತಾ ಫ್ರಾಂಕ್ಲಿನ್ಚಾರ್ಲ್ಸ್ ಎಚ್ ಎಲ್ಲಿಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


