ವಿದೇಶ

ನವೀಕರಿಸಬಹುದಾದ ಇಂಧನ ಹೂಡಿಕೆ: ಇನ್ವೆಸ್ಟ್ ಇಂಡಿಯಾಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತವಾದ ಪ್ರಶಸ್ತಿಯಾದ 'ಚಾಂಪಿಯನ್ ಆಫ್ ಅರ್ಥ್' ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ನೀಡಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು

ನವೀಕರಿಸಬಹುದಾದ ಇಂಧನ  ಹೂಡಿಕೆ: ಇನ್ವೆಸ್ಟ್ ಇಂಡಿಯಾಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ
ನವೀಕರಿಸಬಹುದಾದ ಇಂಧನ ಹೂಡಿಕೆ: ಇನ್ವೆಸ್ಟ್ ಇಂಡಿಯಾಗೆವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ
Published On :
ವಿಶ್ವಸಂಸ್ಥೆ: ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತವಾದ ಪ್ರಶಸ್ತಿಯಾದ  'ಚಾಂಪಿಯನ್ ಆಫ್ ಅರ್ಥ್' ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ನೀಡಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ. 
ಈ ಬಾರಿ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತಿರುವುದಾಗಿ ಭಾರತಕ್ಕೆ ವಿಶ್ವಸಂಸ್ಥೆಯ ಪ್ರತಿಷ್ಠಿ ಪ್ರಶಸ್ತಿ ಲಭ್ಯವಾಗಿದ್ದು, ಇನ್ವೆಸ್ಟ್ ಇಂಡಿಯಾದ ಸಿಇಒ ದೀಪಕ್ ಬಾಗ್ಲಾ ಅವರಿಗೆ ಜಿನಿವಾದಲ್ಲಿ ಅರ್ಮೇನಿಯನ್ ಅಧ್ಯಕ್ಷರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. 
ಯುಎನ್ ಸಿಟಿಎಡಿ ನವೀಕರಿಸಬಹುದಾದ ಇಂಧನ  ಹೂಡಿಕೆಯ ವಿಷಯದಲ್ಲಿ ಭಾರತದ ಉತ್ತೇಜನದ ಬಗ್ಗೆ ಮಾತನಾಡಿದ್ದು, ಭಾರತ ಜಾಗತಿಕ ಮಟ್ಟದ ವಿಂಡ್ ಟರ್ಬೈನ್ ಕಂಪನಿಗಳಿಗೆ ಬ್ಲೇಡ್ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಕ್ಕೆ ಉತ್ತೇಜನ ನೀಡುತ್ತಿರುವುದನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದೆ.  ಕಾರ್ಯಕ್ರಮದಲ್ಲಿ 160 ರಾಷ್ಟ್ರಗಳಿಂದ 5,000 ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.