ಆಫ್ಘನ್ ಸಂಸದೀಯ ಚುನಾವಣೆ ವೇಳೆ ಭೀಕರ ಆತ್ಮಹತ್ಯಾ ದಾಳಿ, ಕನಿಷ್ಠ 15 ಸಾವು
ಆಫ್ಘಾನಿಸ್ತಾನ ಸಂಸದೀಯ ಚುನಾವಣೆ ನಿಮಿತ್ತ ಮತದಾನದ ವೇಳೆಯಲ್ಲೇ ಉಗ್ರರು ತಮ್ಮ ಅಟ್ಟಹಾಸೆ ಮೆರೆದಿದ್ದು, ಆತ್ಮಹತ್ಯಾ ದಾಳಿ ನಡೆಸಿದ ಪರಿಣಾಮ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

Published On :
ಕಾಬುಲ್: ಆಫ್ಘಾನಿಸ್ತಾನ ಸಂಸದೀಯ ಚುನಾವಣೆ ನಿಮಿತ್ತ ಮತದಾನದ ವೇಳೆಯಲ್ಲೇ ಉಗ್ರರು ತಮ್ಮ ಅಟ್ಟಹಾಸೆ ಮೆರೆದಿದ್ದು, ಆತ್ಮಹತ್ಯಾ ದಾಳಿ ನಡೆಸಿದ ಪರಿಣಾಮ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಉತ್ತರ ಕಾಬುಲ್ ನ ಮತಗಟ್ಟೆಗೆ ಆಗಮಿಸಿದ್ದ ಆತ್ಮಹತ್ಯಾ ದಾಳಿಕೋರ ನೋಡ ನೋಡುತ್ತಿದ್ದಂತೆಯೇ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಈ ವೇಳೆ ಮತದಾನಕ್ಕೆ ಆಗಮಿಸಿದ್ದ 10 ಮಂದಿ ನಾಗರಿಕರು ಮತ್ತು 5 ಮಂದಿ ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ, ಚುನಾವಣಾ ಸಿಬ್ಬಂದಿಗಳು ಸೇರಿ ಸುಮಾರು 150ಕ್ಕೂ ಅಧಿಕ ಮಂದಿ ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವೇಳೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 1 ಮಂದಿ ಸಾವಿಗೀಡಾಗಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಾಳುಗಳ ಸಂಖ್ಯೆ ಹೆಚ್ಚಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಅಂತೆಯೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ನೇತೃತ್ವ ವಹಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kabulಕಾಬುಲ್Suicide Bomb Attackಆತ್ಮಹತ್ಯಾ ಬಾಂಬ್ ದಾಳಿAfghanistan Parliamentary Electionsಆಫ್ಘಾನಿಸ್ತಾನ ಸಂಸದೀಯ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


