ಪಾಕಿಸ್ತಾನದ ಸರಣಿ ಅತ್ಯಾಚಾರಿ ಮತ್ತು ಕೊಲೆಗಾರನಿಗೆ ಗಲ್ಲು ಶಿಕ್ಷೆ ಜಾರಿ!
7 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆಯೂ ಸೇರಿದಂತೆ ಸರಣಿ ಅತ್ಯಾಚಾರ ಪ್ರಕರಣಗಳಿಂದಾಗಿ ಕುಖ್ಯಾತಿ ಪಡೆದಿದ್ದ ಇಮ್ರಾನ್ ಅಲಿ ಎಂಬ ಅಪರಾಧಿಯನ್ನು ಪಾಕಿಸ್ತಾನದಲ್ಲಿ ಗಲ್ಲಿಗೇರಿಸಲಾಗಿದೆ.

Published On :
ಲಾಹೋರ್: 7 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆಯೂ ಸೇರಿದಂತೆ ಸರಣಿ ಅತ್ಯಾಚಾರ ಪ್ರಕರಣಗಳಿಂದಾಗಿ ಕುಖ್ಯಾತಿ ಪಡೆದಿದ್ದ ಇಮ್ರಾನ್ ಅಲಿ ಎಂಬ ಅಪರಾಧಿಯನ್ನು ಪಾಕಿಸ್ತಾನದಲ್ಲಿ ಗಲ್ಲಿಗೇರಿಸಲಾಗಿದೆ.
ಬುಧವಾರ ಬೆಳಗ್ಗೆ ಲಾಹೋರ್ ನ ಕೋಟ್ ಲಕಪತ್ ಜೈಲಿನಲ್ಲಿ ಇಮ್ರಾನ್ ಅಲಿಯನ್ನು ನ್ಯಾಯಾಧೀಶರ ಸಮಕ್ಷಮದಲ್ಲಿ ಕೋರ್ಟ್ ಆದೇಶದಂತೆ ಗಲ್ಲಿಗೇರಿಸಲಾಗಿದೆ. ಇಮ್ರಾನ್ ಅಲಿ ಕಸೂರ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಅಲ್ಲದೆ ಆಕೆಯ ಶವವನ್ನು ಕಸದ ತೊಟ್ಟಿಗೆ ಎಸೆದು ಪರಾರಿಯಾಗಿದ್ದ.
ಅತ್ಯಾಚಾರ ನಡೆದ 2 ವಾರಗಳ ಬಳಿಕ ಇಮ್ರಾನ್ ಅಲಿಯನ್ನು ಬಂಧಿಸಲಾಗಿತ್ತು. ಈ ವೇಳೆಗಾಗಲೇ ಪಾಕಿಸ್ತಾನದಲ್ಲಿ ಬಾಲಕಿ ಮೇಲಿನ ಹತ್ಯಾಚಾರ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗಿ ಭಾರಿ ಪ್ರತಿಭಟನೆಗೂ ಕಾರಣವಾಗಿತ್ತು. ಇಮ್ರಾನ್ ಅಲಿ ಬಂಧನದ ಬಳಿಕ ಆತನ್ನು ವಿಚಾರಣೆಗೊಳಪಡಿಸಿದಾಗ ಆತ ಮತ್ತಷ್ಟು ಅತ್ಯಾಚಾರಗಳ ಕುರಿತು ಬಾಯಿಬಿಟ್ಟಿದ್ದ. ಜಿಲ್ಲೆಯಲ್ಲಿ ನಡೆದಿದ್ದ ವಿವಿಧ ಸರಣಿ ಅತ್ಯಾಚಾರ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದು ಬಯಲಾಗಿತ್ತು.
ಇದೀಗ ಅತ್ಯಾಚಾರಿ ಕೊಲೆಗಾರನನ್ನು ಗಲ್ಲಿಗೇರಿಸುವಂತೆ ಪಾಕಿಸ್ತಾನ ಸೇನಾ ನ್ಯಾಯಾಲಯ ತೀರ್ಪುನೀಡಿದ್ದು, ತೀರ್ಪಿನ ಅನ್ವಯ ಇಂದು ಕೋಟ್ ಲಕಪತ್ ಜೈಲಿನಲ್ಲಿ ನ್ಯಾಯಾಧೀಶ ಸಮ್ಮುಖದಲ್ಲಿ ಅಪರಾಧಿಯನ್ನು ಗಲ್ಲಿಗೇರಿಸಲಾಗಿದೆ. ಸಂತ್ರಸ್ಥ ಬಾಲಕಿ ಪೋಷಕರು ಅರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಒತ್ತಾಯಿಸಿದ್ದರಾದರೂ, ನ್ಯಾಯಾಲಯ ಜೈಲಿನಲ್ಲೇ ಗಲ್ಲಿಗೇರಿಸುವಂತೆ ತೀರ್ಪು ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Crimeಕೊಲೆmurderಅಪರಾಧಲಾಹೋರ್LahorePakistan serial killerKot Lakhpat Central Jailಪಾಕಿಸ್ತಾನ ಸರಣಿ ಹಂತಕಕೋಟ್ ಲಕಪತ್ ಜೈಲು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


