ಪಾಕಿಸ್ತಾನವನ್ನು 'ಯುರೋಪ್ ಗಿಂತ ಸ್ವಚ್ಚ ರಾಷ್ಟ್ರ'ವನ್ನಾಗಿಸುತ್ತೇನೆ: ಇಮ್ರಾನ್ ಖಾನ್ ಪ್ರತಿಜ್ಞೆ
ಪಾಕಿಸ್ತಾನವನ್ನು "ಯುರೋಪ್ ಗಿಂತಲೂ ಸ್ವಚ್ಚ" ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ಪ್ರತಿಜ್ಞೆ ಮಾಡಿದ್ದಾರೆ. ದೇಶದಲ್ಲಿನ ನೈರ್ಮಲ್ಯ.....

Published On :
ಇಸ್ಲಾಮಾಬಾದ್: ಪಾಕಿಸ್ತಾನವನ್ನು "ಯುರೋಪ್ ಗಿಂತಲೂ ಸ್ವಚ್ಚ" ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ಪ್ರತಿಜ್ಞೆ ಮಾಡಿದ್ದಾರೆ. ದೇಶದಲ್ಲಿನ ನೈರ್ಮಲ್ಯ ಗುಣಮಟ್ಟವನ್ನು ಸುಧಾರಿಸುವ ಆಂದೋಲನಕ್ಕೆ ಅಚಾಲನೆ ನಿಡಿದ ಇಮ್ರಾನ್ ಖಾನ್ ಈ ಹೇಳಿಕೆ ನಿಡಿದ್ದಾರೆ.
ಇಸ್ಲಾಮಾಬಾದ್ನಲ್ಲಿರುವ ಮಾಡೆಲ್ ಕಾಲೇಜ್ ಫಾರ್ ಗರ್ಲ್ಸ್ ನಲ್ಲಿ 'ಕ್ಲೀನ್ ಆಂಡ್ ಗ್ರೀನ್ ಪಾಕಿಸ್ತಾನ್’ ಡ್ರೈವ್ ನಲ್ಲಿ ಅವರು ಭಾಗವಹಿಸಿದ್ದಾರೆ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ದೇಶದ ಭವಿಷ್ಯದೊಂದಿಗೆ ಸಂಪರ್ಕ ಹೊಂದಿರುವ ಇಂತಹಾ ಅಭಿಯಾನದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಜನರು ಭಾಗವಹಿಸಬೇಕು ಎಂದು ಖಾನ್ ಒತ್ತಾಯಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಪಾಕಿಸ್ತಾನವನ್ನು ಯುರೋಪ್ ಗಿಂತ ಸ್ವಚ್ಚ ರಾಷ್ಟ್ರವಾಗಿ ಮಾಡುವ ಪಣದೊಟ್ಟಿದ್ದಾರೆ.
"ಇದು ಸಂಭವಿಸಬೇಕಾದರೆ ನಾವು ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. "ಪರಿಸರವನ್ನು ರಕ್ಷಿಸಲು ಮತ್ತು ಜಾಗತಿಕ ತಾಪಮಾನವನ್ನು ತಗ್ಗಿಸಲು ತೋಟಗಾರಿಕೆಯು ಅತ್ಯಗತ್ಯವಾಗಿದೆ." ಇಮ್ರಾನ್ ಖಾನ್ ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ವಿಚಾರದಲ್ಲಿ ಪಾಕಿಸ್ತಾನ ಏಳನೇ ದುರ್ಬಲ ರಾಷ್ಟ್ರವಾಗಿ ಗುರುತಿಸಲ್ಪಟ್ಟಿದೆ, ಲಾಹೋರ್ ನಂತಹಾ ಮಹಾನಗರಗಳಲ್ಲಿ ಮಾಲಿನ್ಯ ಮಟ್ಟವು ಅತ್ಯಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಮ್ಮ ಸರ್ಕಾರ ಒಂದು ಶತಕೋಟಿ ಮರಗಳನ್ನು ನೆಟ್ಟಿದೆ ಎಂದು ಅವರು ಹೇಳಿದ್ದು ಸರ್ಕಾರವು ದೇಶಾದ್ಯಂತ 10 ಬಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ ಎಂದರು.
ಸ್ವಚ್ಛತೆ ಅಭಿಯಾನದ ಅಂಗಆಗಿ ಒಳಚರಂಡಿ ಮತ್ತು ನೈರ್ಮಲ್ಯ ವ್ಯವಸ್ಥೆಗಳ ಸುಧಾರಣೆ ಕೇವಲ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಅವು ಕೊಳೆಗೇರಿಗಳು ಮತ್ತು ಹಳ್ಳಿಗಳಲ್ಲಿ ಸಹ ಸುಧಾರಣೆಗೊಳ್ಳಬೇಕಿದೆ.ಘನ ತ್ಯಾಜ್ಯ ವಿಲೇವಾರಿಗಾಗಿ ಹಳ್ಳಿಗಳಿಂದ ತಹಶೀಲ್ ಮಟ್ಟದವರೆಗೆ ಡಂಪಿಂಗ್ ಯಾರ್ಡ್ ಗಳನ್ನು ಗುರುತಿಸಲಾಗುತ್ತದೆ ಎಂದು ಖಾನ್ ಹೇಳಿದ್ದಾರೆ. ಪಾಕಿಸ್ತಾನವನ್ನು ಶುದ್ಧ ಹಾಗೂ ಹಸಿರನ್ನಾಗಿಸಲು ವಿದ್ಯಾರ್ಥಿಗಳುಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


