ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆಯಾಗಿದೆ. ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದ ಭಾರತವು, ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.

ನ್ಯೂಯಾರ್ಕ್ : ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆಯಾಗಿದೆ. ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದ ಭಾರತವು, ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.
ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ನಿನ್ನೆ ನಡೆದ ಮತದಾನ ವೇಳೆ 193 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದವು. ಭಾರತವು ಒಟ್ಟು 188 ಮತಗಳನ್ನು ಪಡೆದುಕೊಂಡಿತು, ಬಾಂಗ್ಲಾದೇಶ 178 ಮತ ಪಡೆಯಿತು.
ಸದ್ಯ 47 ಸದಸ್ಯ ಬಲದ ಮಂಡಳಿಗೆ ಭಾರತವು ಜನವರಿಯಲ್ಲಿ ಸೇರ್ಪಡೆಯಾಗಲಿದ್ದು, ಏಷ್ಯಾ-ಫೆಸಿಪಿಕ್ ಭಾಗದ ಚೀನಾ, ನೇಪಾಳ, ಹಾಗೂ ಪಾಕಿಸ್ತಾನ ಜೊತೆಗೆ ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


