ವಿದೇಶ

ಪಾಕ್ ಐಎಸ್ಐ ನೂತನ ಮುಖ್ಯಸ್ಥಾಗಿ ಲೆ.ಜ. ಅಸೀಮ್ ಮುನಿರ್ ನೇಮಕ

ಲೆಫ್ಟಿನೆಂಟ್ ಜನರಲ್ ಅಸೀಮ್ ಮುನಿರ್ ಪಾಕಿಸ್ತಾನದ ಪ್ರಬಲ ಗೂಢಚಾರ ಸಂಸ್ಥೆ ಐಎಸ್ಐ ನ ನೂತನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ ಎಂದು ಪಾಕ್ ಸೇನಾ ಮಾದ್ಯಮ ವಿಭಾಗ ಹೇಳಿದೆ.

ಪಾಕ್ ಐಎಸ್ಐ ನೂತನ ಮುಖ್ಯಸ್ಥಾಗಿ ಲೆ.ಜ. ಅಸೀಮ್ ಮುನಿರ್ ನೇಮಕ
ಅಸಿಮ್ ಮುನಿರ್
Published On :
ಇಸ್ಲಾಮಾಬಾದ್: ಲೆಫ್ಟಿನೆಂಟ್ ಜನರಲ್ ಅಸೀಮ್ ಮುನಿರ್ ಪಾಕಿಸ್ತಾನದ ಪ್ರಬಲ ಗೂಢಚಾರ ಸಂಸ್ಥೆ ಐಎಸ್ಐ ನ ನೂತನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ ಎಂದು ಪಾಕ್ ಸೇನಾ ಮಾದ್ಯಮ ವಿಭಾಗ ಹೇಳಿದೆ.
ಹಿಂದೆ ಮಿಲಿಟರಿ ಗುಪ್ತಚರ (ಎಂಐ) ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಮುನಿರ್ ಇತ್ತೀಚೆಗೆ ಲೆಫ್ಟಿನೆಂಟ್ ಜನರಲ್ ಶ್ರೇಣಿಗೆ ಭಡ್ತಿ ಹೊಂದಿದ್ದರು.ಸೇನಾ ಮುಖ್ಯಸ್ಥರಾದ ಜನರಲ್ ಖಮರ್ ಜಾವೇದ್ ಭಾಜ್ವಾನೇತೃತ್ವದ ಆರ್ಮಿ ಪ್ರಮೋಷನ್ ಮಂಡಳಿ ಮುನಿರ್ ಅವರ ಭಡ್ತಿಗೆ ಸಮ್ಮತಿಸಿತ್ತು.
ಲೆಫ್ಟಿನೆಂಟ್ ಜನರಲ್ ನವೀದ್ ಮುಖ್ತಾರ್ ಅವರಿಂದ ತೆರವಾದ ಸ್ಥಾನಕ್ಕೆ ಮುನಿರ್ ನೇಮಕವಾಗಿದ್ದಾರೆ. . ಮುಖ್ತಾರ್ ಡಿಸೆಂಬರ್ 2016 ರಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಡೈರೆಕ್ಟರ್ ಜನರಲ್ ಕಛೇರಿ ಆಡಳಿತ ವಹಿಸಿಕೊಂಡಿದ್ದರು.
ಇದಕ್ಕೆ ಮುನ್ನ ಮುನಿರ್ ಉತ್ತರ ಭಾಗಗಳ ಫೋರ್ಸ್ ಕಮಾಡರ್ ಆಗಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.