ಭೀಕರ ಕಾಳ್ಗಿಚ್ಚಿಗೆ ಹಾಲಿವುಡ್ ತಾರೆಯರ ಬದುಕೆ ಛಿದ್ರ, ಭೀಕರತೆ ಬಿಚ್ಚಿಟ್ಟ ನಟ ವಿಲ್ ಸ್ಮಿತ್, ಕಿಮ್ ಕರ್ದಾಶಿಯನ್
ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿರುವ ಅತೀ ವಿನಾಶಕಾರಿ ಕಾಳ್ಗಿಚ್ಚು ಹಾಲಿವುಡ್ ತಾರೆಯರು ಸೇರಿದಂತೆ ಸಾವಿರಾರೂ ಜನರ ಬದುಕನ್ನು ಛಿದ್ರಗೊಳಿಸಿದೆ...

Published On :
ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿರುವ ಅತೀ ವಿನಾಶಕಾರಿ ಕಾಳ್ಗಿಚ್ಚು ಹಾಲಿವುಡ್ ತಾರೆಯರು ಸೇರಿದಂತೆ ಸಾವಿರಾರೂ ಜನರ ಬದುಕನ್ನು ಛಿದ್ರಗೊಳಿಸಿದೆ.
ಸುಮಾರು 80ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಇನ್ನು ಕಾಳ್ಗಿಚ್ಚಿನಿಂದಾಗಿ 1000ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವಾರದ ಹಿಂದೆ ಹಬ್ಬಿದ ಈ ಅತಿ ಅನಾಹುತಕಾರಿ ಕಾಳ್ಗಿಚ್ಚಿಗೆ ಈಗಾಗಲೇ 1,42,000 ಎಕರೆ ಪ್ರದೇಶ ಸುಟ್ಟುಕರಕಲಾಗಿದೆ. ಇನ್ನು ರಸ್ತೆ ಮಧ್ಯೆ ನಿಲ್ಲಿಸಿದ್ದ ನೂರಾರು ಕಾರುಗಳು, ಸಾವಿರಾರು ಮನೆಗಳು ಸುಟ್ಟುಹೋಗಿವೆ.

ಇನ್ನು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಹಾಲಿವುಡ್ ನಟ ವಿಲ್ ಸ್ಮಿತ್, ಲೇಡಿ ಗಾಗ್, ಕಿಮ್ ಕರ್ದಾಶಿಯಾನ್ ಹಾಗೂ ಚೇರ್ ಅವರನ್ನು ಬಲವಂತವಾಗಿ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಕಾಳ್ಗಿಚ್ಚಿನ ಕರಾಳತೆ ಕುರಿತು ವಿಲ್ ಸ್ಮಿತ್ ಸೇರಿದಂತೆ ಹಲವು ನಟರು ಮಾತನಾಡಿದ್ದಾರೆ.

ಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಮನೆ

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಹಾಲಿವುಡ್Will Smithವಿಲ್ ಸ್ಮಿತ್Kim KardashianLady Gagaಕಿಮ್ ಕರ್ದಾಶಿಯಾನ್California WildfiresHollywooodಕ್ಯಾಲಿಫೋರ್ನಿಯಾ ಕಾಳ್ಗಿಚ್ಚುಲೇಡಿ ಗಾಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


