ವಿದೇಶ

ಸಿರಿಸೇನಾ ಪಕ್ಷ ತೊರೆದು ಶ್ರೀಲಂಕಾ ಪೀಪಲ್ಸ್​ ಪಾರ್ಟಿ ಸೇರಿದ ಮಹಿಂದಾ ರಾಜಪಕ್ಸ

ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು,ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ

ಸಿರಿಸೇನಾ ಪಕ್ಷ ತೊರೆದು ಶ್ರೀಲಂಕಾ ಪೀಪಲ್ಸ್​ ಪಾರ್ಟಿ ಸೇರಿದ ಮಹಿಂದಾ ರಾಜಪಕ್ಸ
ಮಹಿಂದಾ ರಾಜಪಕ್ಸ
Published On :
ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ  ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು,ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಪಕ್ಷದೊಂದಿಗಿನ 50 ವರ್ಷಗಳ ಒಡನಾಟವನ್ನು ಕಡಿದುಕೊಂಡಿದ್ದಾರೆ.
ಮಹಿಂದಾ ರಾಜಪಕ್ಸ ಸಿರಿಸೇನಾ ಅಧ್ಯಕ್ಷರಾಗಿರುವ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್​ಎಲ್​ಎಫ್​ಪಿ) ಪಕ್ಷವನ್ನು ತೊರೆದು ಹೊಸದಾಗಿ ಸ್ಥಾಪಿಸಲ್ಪಟ್ಟಿರುವ ಶ್ರೀಲಂಕಾ ಪೀಪಲ್ಸ್​ ಪಾರ್ಟಿ (ಎಸ್​ಎಲ್​ಪಿಪಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
ಮಹಿಂದಾ ರಾಜಪಕ್ಸ ಅವರು 2006ರಿಂದ 2015ರವರೆಗೆ ಪಕ್ಷದ ಅಧ್ಯಕ್ಷರಾಗಿಯೂ ದುಡಿದಿದ್ದರು. ಆದರೆ ಅ.26ರಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಳಿಸಿ ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನಿಯೋಜಿಸಿದ್ದರು.
ಆದರೆ ಮಹಿಂದಾ ರಾಜಪಕ್ಸ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸುವುದು ಅಸಾಧ್ಯ ಎಂಬುದು ಖಚಿತವಾಗುತ್ತಿದ್ದ ಅಧ್ಯಕ್ಷ ಸಿರಿಸೇನಾ ಸಂಸತ್​ ಅನ್ನು ವಿಸರ್ಜಿಸಿದ್ದರು. ನಂತರ ಜನವರಿ 5 ರಂದು ಚುನಾವಣೆ ಘೋಷಣೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.