ನಿವೃತ್ತಿಯಾದರೂ ಬಿಟ್ಟಿಲ್ಲ ಶಿಕ್ಷಕ ವೃತ್ತಿ, ಶ್ವೇತ ಭವನದ ಪತ್ರದಲ್ಲಿ ದೋಷಗಳನ್ನು ಗುರುತಿಸಿದ ಶಿಕ್ಷಕಿ!
ಶಿಕ್ಷಕರು ನಿವೃತ್ತರಾದ ನಂತರವೂ ತಪ್ಪುಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.

Published On :
ನ್ಯೂಯಾರ್ಕ್: ಶಿಕ್ಷಕರು ನಿವೃತ್ತರಾದ ನಂತರವೂ ತಪ್ಪುಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಈಕೆ ಸಾಮಾನ್ಯರ ತಪ್ಪನ್ನು ತಿದ್ದಿ ಸುದ್ದಿಯಾಗಿಲ್ಲ, ಬದಲಾಗಿ ಅಮೆರಿಕದ ಶಕ್ತಿ ಕೇಂದ್ರ ಶ್ವೇತ ಭವನದ ಪತ್ರಗಳಲ್ಲಿ ಕಂಡು ಬಂದ ದೋಷಗಳನ್ನು ತಿದ್ದಿದ್ದು ಸುದ್ದಿಯಾಗಿದ್ದಾರೆ.
ಆಗಿದ್ದು ಇಷ್ಟೇ, ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದಿದ್ದ ಶೂಟಿಂಗ್ ನಲ್ಲಿ 17 ಜನರು ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಯವೊನೆ ಮ್ಯಾಸನ್ (61) ಎಂಬ ನಿವೃತ್ತ ಶಿಕ್ಷಕಿ ಡೊನಾಲ್ಡ್ ಟ್ರಂಪ್ ಗೆ ಪತ್ರ ಬರೆದು ಪ್ರತಿಯೊಬ್ಬರ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದರ ಬಗ್ಗೆ ಕೇಳಿದ್ದರು. ಕೊನೆಗೊಂದು ದಿನ ಶ್ವೇತ ಭವನದಿಂದ ಉತ್ತರವೂ ಬಂದಿದೆ. ಆದರೆ ಅದರಲ್ಲಿ ಶಿಕ್ಷಕಿ ಪ್ರಸ್ತಾಪಿಸಿದ್ದ ಆಕೆಯ ಆತಂಕಗಳ ಬಗ್ಗೆ ಏನನ್ನೂ ಪ್ರಸ್ತಾಪಿಸಿರಲಿಲ್ಲ. ಇದರಿಂದ ಕುಪಿತಗೊಂಡ ಶಿಕ್ಷಕಿ ಶ್ವೇತ ಭವನದಿಂದ ತಮಗೆ ಬಂದಿದ್ದ ಪತ್ರದಲ್ಲಿದ್ದ ದೋಷಗಳನ್ನು ತೋರಿಸಿ ಫೇಸ್ ಬುಕ್ ನಲ್ಲಿ ಯಥಾವತ್ ಪ್ರಕಟಿಸಿದ್ದು, ಇದನ್ನೇ ಶ್ವೇತ ಭವನಕ್ಕೆ ಇ-ಮೇಲ್ ಮೂಲಕ ವಾಪಸ್ ಕಳಿಸಿದ್ದಾರೆ.
"ಪತ್ರದಲ್ಲಿ ನಾನು ಪ್ರಸ್ತಾಪಿಸಿದ್ದ ಆತಂಕಕಾರಿ ವಿಷಯಗಳ ಬಗ್ಗೆ ಶ್ವೇತ ಭವನ ಉತ್ತರಿಸಿಲ್ಲ, ಬದಲಾಗಿ ಘಟನೆ ನಡೆದ ಬಳಿಕ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ, ಎಷ್ಟೆಲ್ಲಾ ಸಭೆಗಳನ್ನು ಮಾಡಿದ್ದೇವೆ ಎಂಬುದನ್ನು ಹೇಳಲಾಗಿತ್ತು. ಇದನ್ನು ಗಮನಿಸಿದ ಶಿಕ್ಷಕಿ ಪತ್ರದಲ್ಲಿದ್ದ ಅಕ್ಷರ ಹಾಗೂ ವ್ಯಾಕರಣ ದೋಷಗಳನ್ನು ಗುರುತಿಸಿ, ನೀವು ಗ್ರಾಮರ್ ನ್ನು ಪರಿಶೀಲಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


