ಸಿಂಧೂ ನೀರು ಹಂಚಿಕೆ ಪರಿಹಾರ ಸೂತ್ರ: ಪಾಕಿಸ್ತಾನದೊಡನೆ ಒಡಂಬಡಿಕೆ ಇಲ್ಲ ಎಂದ ವಿಶ್ವ ಬ್ಯಾಂಕ್
ಭಾರತ ಹಾಗೂ ಪಾಕಿಸ್ತಾನ ನಡುವೆ ವಿವಾದಕ್ಕೆ ಕಾರಣವಾದ ಸಿಂಧೂ ನದಿ ನೀರು ಹಂಚಿಕೆ ವಿವಾದದ ಕುರಿತಂತೆ ತಾನು ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದೆ.

Published On :
ವಾಷಿಂಗ್ ಟನ್: ಭಾರತ ಹಾಗೂ ಪಾಕಿಸ್ತಾನ ನಡುವೆ ವಿವಾದಕ್ಕೆ ಕಾರಣವಾದ ಸಿಂಧೂ ನದಿ ನೀರು ಹಂಚಿಕೆ ವಿವಾದದ ಪರಿಹಾರ ಕುರಿತಂತೆ ಪಾಕ್ ನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಿಲ್ಲ ಎಂದು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದೆ.
ಜಮ್ಮು ಕಾಶ್ಮೀರದ ಕಿಶನ್ ಗಂಗಾ ಯೋಜನೆ ಉದ್ಘಾಟನೆಗೊಂಡ ಎರಡು ದಿನಗಳ ಬಳಿಕ ವಾಷಿಂಗ್ ಟನ್ ನಲ್ಲಿ ನಡೆದ ಮಾತುಕತೆ ವೇಳೆ ವಿಶ್ವ ಬ್ಯಾಂಕ್ ಈ ಹೇಳಿಕೆ ನಿಡಿದೆ.
ಅಟಾರ್ನಿ ಜನರಲ್ ಅಷ್ತಾರ್ ಅಸಫ್ ಅಲಿ ನೇತೃತ್ವದ ಉನ್ನತ-ಪಾಕಿಸ್ತಾನಿ ನಿಯೋಗವು ವಿಶ್ವ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟಲಿನಾ ಜಾರ್ಜಿವಾ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಈ ಚರ್ಚೆಯ ವೇಳೆ ಪಾಕಿಸ್ತಾನ ಭಾರತದೊಡನೆ ಸಿಂಧೂ ನದಿ ನೀರು ಹಂಚಿಕೆ ವಿಚಾರ ಸಂಬಂಧ ಒಂದು ಸೌಹಾರ್ದವಾದ ತೀರ್ಮಾನ ಕೈಗೊಳ್ಳಲು, ಎರಡು ರಾಷ್ಟ್ರಗಳ ನಡುವಿನೆ ಭಿನ್ನಾಭಿಪ್ರಾಯ ಕೊನೆಗೊಳಿಸಲು "ಹಲವಾರು ಕಾರ್ಯವಿಧಾನದ ಆಯ್ಕೆಗಳ" ಕುರಿತಂತೆ ಮಾತುಕತೆ ನಡೆದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
"ಒಪ್ಪಂದದ ಅನುಸಾರ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ವಿಶ್ವ ಬ್ಯಾಂಕ್ ಎರಡೂ ದೇಶಗಳ ನಡುವೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಕಿಶನ್ ಗಂಗಾ ಯೋಜನೆ ಉದ್ಘಾಟನೆ ಬಗ್ಗೆ ಪಾಕಿಸ್ತಾನ ತನ್ನ ಕಳವಳವನ್ನು ಹಂಚಿಕೊಂಡೀದೆ " ವಿಶ್ವ ಬ್ಯಾಂಕ್ ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ 330 ಮೆಗಾವಾಟ್ ಸಾಮರ್ಥ್ಯದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯನ್ನು ಪ್ರಧಾನಿ ಮೋದಿ ಕಳೆದ ವಾರ ಉದ್ಘಾಟಿಸಿದ್ದರು. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆದು ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಈ ಯೋಜನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನWorld Bankವಿಶ್ವ ಬ್ಯಾಂಕ್Indus Waters TreatyKishanganga hydroelectric projectಸಿಂಧೂ ನೀರು ಹಂಚಿಕೆ ಒಪ್ಪಂದಕಿಶನ್ ಗಂಗಾ ಜಲವಿದ್ಯುತ್ ಯೋಜನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


