ವಿದೇಶ

ನಟಿ ಮೇಘನ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಿಟನ್ ಪ್ರಿನ್ಸ್ ಹ್ಯಾರಿ

ಬ್ರಿಟನ್‌ ರಾಜಕುಮಾರ ಹ್ಯಾರಿ ಅವರು ನಟಿ ಮೇಘನ್‌ ಮಾರ್ಕೆಲ್‌ ಅವರೊಂದಿಗೆ ಶನಿವಾರ ದಾಂಪತ್ಯ ಜೀವನಕ್ಕೆ....

ನಟಿ ಮೇಘನ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಿಟನ್ ಪ್ರಿನ್ಸ್ ಹ್ಯಾರಿ
ಪ್ರಿನ್ಸ್ ಹ್ಯಾರಿ - ಮೇಘನ್ ಮಾರ್ಕೆಲ್
Published On :
ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಅವರು ನಟಿ ಮೇಘನ್‌ ಮಾರ್ಕೆಲ್‌ ಅವರೊಂದಿಗೆ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಲಂಡನ್ ನ ಥೇಮ್ಸ್ ನದಿಯ ಪಶ್ಚಿಮ ಭಾಗದಲ್ಲಿರುವ ಸೆಂಟ್ ಜಾರ್ಜ್ ಚಾಪೆಲ್ ನ ವಿಂಡ್ಸರ್ ಕ್ಯಾಸೆಲ್ ನಲ್ಲಿ ಹ್ಯಾರಿ ಮತ್ತು ಮೇಘಮ್ ಪರಸ್ಪರ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಸತಿಪತಿಗಳಾದರು.
ಬ್ರಿಟನ್ ರಾಜ ಮನೆತನದ ಐದನೇ ರಾಜಕುಮಾರ, 33 ವರ್ಷದ ಹ್ಯಾರಿ, ಜನಪ್ರಿಯ ಟಿವಿ ಧಾರಾವಾಹಿ ‘ಸ್ಯೂಟ್‌’, 'ಫ್ರಿಂಜ್'ನಲ್ಲಿ ಅಭಿನಯಿಸಿದ್ದ 36 ವರ್ಷದ ನಟಿ. ವಿಚ್ಛೇದಿತೆ ಮೇಘನ್ ಮಾರ್ಕೆಲ್‌ ಅವರ ಕೈಹಿಡಿದಿದ್ದಾರೆ. 
ಮೇಘನ್ 2011ರಲ್ಲಿ ನಿರ್ವಪಕರೊಬ್ಬರನ್ನು ವಿವಾಹವಾಗಿ, ಎರಡು ವರ್ಷದಲ್ಲೇ ವಿಚ್ಛೇದನ ಪಡೆದಿದ್ದರು. ಅಮೆರಿಕನ್ ಅಥವಾ ವಿಚ್ಛೇದಿತರನ್ನು ಲಂಡನ್ ರಾಜಮನೆತನ ವಿವಾಹವಾಗುತ್ತಿರುವುದು ಇದೇ ಮೊದಲೇನಲ್ಲ. 1936ರಲ್ಲಿ ಎಡ್ವರರ್ಡ್- 3 ಎರಡು ಬಾರಿ ವಿಚ್ಛೇದಿತರಾಗಿದ್ದ ವಲ್ಲೀಸ್ ಸಿಮ್ಸ್​ನ್ ಅವರನ್ನು ವಿವಾಹವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.