ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರೀಕರಣ: ಚೀನಾಗೆ ಅಮೆರಿಕಾ ಎಚ್ಚರಿಕೆ
ಚೀನಾ ನಿಯೋಜಿಸಿರುವ ಹಡಗು ವಿರೋಧಿ ಸಮುದ್ರ ಕ್ಷಿಪಣಿ ಮತ್ತು ಮೇಲ್ಮೈಯಿಂದ ಗಾಳಿ ಕ್ಷಿಪಣಿ ....

ವಾಷಿಂಗ್ಟನ್: ಚೀನಾ ನಿಯೋಜಿಸಿರುವ ಹಡಗು ವಿರೋಧಿ ಸಮುದ್ರ ಕ್ಷಿಪಣಿ ಮತ್ತು ಮೇಲ್ಮೈಯಿಂದ ಗಾಳಿ ಕ್ಷಿಪಣಿ ವ್ಯವಸ್ಥೆಯಿರುವ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ನಿರ್ಮಾಣಗೊಳಿಸಿದರೆ ಅದಕ್ಕೆ ತಕ್ಕ ಪರಿಣಾಮಗಳನ್ನು ಚೀನಾ ಎದುರಿಸಬೇಕಾಗಬಹುದು ಎಂದು ಅಮೆರಿಕಾ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಡೊನಾಲ್ಟ್ ಟ್ರಂಪ್ ಆಡಳಿತ ಚೀನಾ ನಾಯಕರ ಜೊತೆ ವಿಷಯ ಪ್ರಸ್ತಾಪಿಸಿದೆ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಸರಹ್ ಸಂದೆರ್ಸ್ ತಿಳಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಮಿಲಿಟರೀಕರಣದ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ಈ ಕುರಿತು ಚೀನಾದ ನಾಯಕರೊಂದಿಗೆ ನಾವು ನೇರವಾಗಿ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಇದರಿಂದಾಗಿ ಚೀನಾ ಸದ್ಯದ ಮತ್ತು ದೀರ್ಘಕಾಲದ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಸಂದೆರ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರ ಮತ್ತು ವಿಶ್ವದ ಇತರ ಭಾಗಗಳಲ್ಲಿ ಚೀನಾದ ಮಿಲಿಟರಿ ನಿರ್ಮಾಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.
ಚೀನಾ ಬೀಜಿಂಗ್ ನಲ್ಲಿ ನಿಯೋಜಿಸಿರುವ ಹಡಗು ವಿರೋಧಿ ಸಮುದ್ರ ಕ್ಷಿಪಣಿ ಮತ್ತು ಮೇಲ್ಮೈಯಿಂದ ಗಾಳಿ ಕ್ಷಿಪಣಿ ವ್ಯವಸ್ಥೆಯನ್ನು ಚೀನಾ ನಿನ್ನೆ ಸಮರ್ಥಿಸಿಕೊಂಡಿತ್ತು. ಸಮುದ್ರ ತೀರದ ಪ್ರದೇಶಗಳಲ್ಲಿ ನಿರ್ವಿವಾದ ಸಾರ್ವಭೌಮತ್ವವನ್ನು ಹೊಂದಿದೆ ಎಂದು ಹೇಳಿದೆ.
ವಿವಾದಿತ ಸಮುದ್ರ ತೀರದಲ್ಲಿ ಚೀನಾ ಮಿಲಿಟರಿ ನಿಯೋಜಿಸಿರುವುದಕ್ಕೆ ಪೆಂಟಗಾನ್ ಕೂಡ ಕಳವಳ ವ್ಯಕ್ತಪಡಿಸಿದೆ. ಕೃತಕ ದ್ವೀಪದಲ್ಲಿ ಮಿಲಿಟರಿ ನಿಯೋಜನೆ ಮಾಡಿರುವುದಕ್ಕೆ ನಮಗೆ ತೀವ್ರ ಕಳವಳವಿದೆ. ಸಮುದ್ರದಲ್ಲಿ ಉಚಿತ ಜಲಸಂಚಾರದಿಂದ ಲಾಭವಾಗುತ್ತದೆ ಎಂಬುದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು. ಅಮೆರಿಕ ನೌಕಾಪಡೆ ಇದಕ್ಕೆ ಹೊಣೆಗಾರ ಎಂದು ಪೆಂಟಗಾನ್ ಮುಖ್ಯ ವಕ್ತಾರ ದನ ವೈಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಎರಡೂ ಭಾಗಗಳಲ್ಲಿ ಚೀನಾ ಪ್ರಾಂತೀಯ ವಿವಾದಗಳಲ್ಲಿ ತೊಡಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


