ವಿದೇಶ

ಮಾನವೀಯತೆ ದೃಷ್ಟಿಯಿಂದ ಅನಾರೋಗ್ಯ ಪೀಡಿತ ಭಾರತೀಯ ಕೈದಿ ಬಿಡುಗಡೆ: ಪಾಕಿಸ್ತಾನ

ಪಾಕಿಸ್ತಾನದಲ್ಲಿ ತೀವ್ರ ಅನಾರೋಗ್ಯ ಪೀಡಿತನಾಗಿರುವ ಭಾರತೀಯ ಕೈದಿಯನ್ನು ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಪಾಕ್ ವಿದೇಶಾಂಗ ಕಾರ್ಯಾಲಯ ಘೋಷಣೆ ಮಾಡಿದೆ.

ಮಾನವೀಯತೆ ದೃಷ್ಟಿಯಿಂದ ಅನಾರೋಗ್ಯ ಪೀಡಿತ ಭಾರತೀಯ ಕೈದಿ ಬಿಡುಗಡೆ: ಪಾಕಿಸ್ತಾನ
ಸಂಗ್ರಹ ಚಿತ್ರ
Published On :
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತೀವ್ರ ಅನಾರೋಗ್ಯ ಪೀಡಿತನಾಗಿರುವ ಭಾರತೀಯ ಕೈದಿಯನ್ನು ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಪಾಕ್ ವಿದೇಶಾಂಗ ಕಾರ್ಯಾಲಯ ಘೋಷಣೆ ಮಾಡಿದೆ.
ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಕಾರ್ಯಾಲಯ ಗುರುವಾರ ಹೇಳಿಕೆ ಬಿಡೆಗಡೆ ಮಾಡಿದ್ದು, ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಕೈದಿ ಜತೀಂದ್ರ ಎಂಬಾತನನ್ನು ಮಾನವೀಯತೆ ಆಧಾರದ ಮೇರೆಗೆ ಬಿಡುಗಡೆ ಮಾಡಲಾಗುತ್ತದೆ. ಮೂಲಗಳ ಪ್ರಕಾರ ಜತೀಂದ್ರ ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದೇ ಕಾರಣಕ್ಕೆ ಮಾನವೀಯತೆ ಆಧಾರದ ಮೇಲೆ ಪಾಕಿಸ್ತಾನ ಜತೀಂದ್ರ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.
ಅಂತೆಯೇ ಪಾಕಿಸ್ತಾನ ಸರ್ಕಾರಿ ಮೂಲಗಳು ತಿಳಿಸಿರುವಂತೆ 2014ರಲ್ಲಿ ಜತೀಂದ್ರನನ್ನು ಬಂಧಿಸಲಾಗಿತ್ತಂತೆ. ಅಕ್ರಮವಾಗಿ ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದರಿಂದ ಆತನನ್ನು ಬಂಧಿಸಲಾಗಿತ್ತು. ಜತೀಂದ್ರ ಭಾರತೀಯ ನಾಗರೀಕತ್ವವನ್ನು ಭಾರತೀಯ ರಾಯಭಾರ ಕಚೇರಿ ಕೂಡ ಸ್ಪಷ್ಟಪಡಿಸಿತ್ತು ಎನ್ನಲಾಗಿದೆ. 
ಜತೀಂದ್ರ ಮಾತ್ರನಲ್ಲ 147 ಭಾರತೀಯ ಮೀನುಗಾರರ ಬಿಡುಗಡೆ
ಇದೇ ವೇಳೆ ಜತೀಂದ್ರ ಮಾತ್ರನಲ್ಲದೇ ಪಾಕಿಸ್ತಾನದ ಜೈಲುಗಳಲ್ಲಿರುವ ಭಾರತೀಯ ಕೈದಿಗಳ ಪೈಕಿ ಉತ್ತಮ ನಡವಳಿಕೆ ತೋರಿದ 147 ಭಾರತೀಯ ಮೀನುಗಾರರನ್ನು ಕೂಡ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ಅಂತೆಯೇ ಇದೀ ರೀತಿಯ ಕ್ರಮ ಭಾರತದಿಂದಲೂ ಬರುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಪಾಕಿಸ್ತಾನ ಹೇಳಿದೆ. ಭಾರತದಲ್ಲಿರುವ 48 ಪಾಕಿಸ್ತಾನ ಮೀನುಗಾರರನ್ನು ಭಾರತ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕರಾಚಿಯ ಮಲ್ಲಿರ್ ಜೈಲಿನಲ್ಲಿರುವ 147 ಭಾರತೀಯ ಮೀನುಗಾರರನ್ನುಪಾಕ್ ಸರ್ಕಾರ ಬಿಡುಗಡೆ ಮಾಡುವ ಸಾದ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.