ವಿದೇಶ

ಸುಷ್ಮಾ ಸ್ವರಾಜ್, ಜಪಾನ್ ಪ್ರಧಾನಿ ಭೇಟಿ: ಸ್ನೇಹ ಸಂಬಂಧ ವರ್ಧನೆಗೆ ಕ್ರಮ

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿ ಮಾಡಿದ್ದಾರೆ

ಸುಷ್ಮಾ ಸ್ವರಾಜ್, ಜಪಾನ್ ಪ್ರಧಾನಿ ಭೇಟಿ: ಸ್ನೇಹ ಸಂಬಂಧ ವರ್ಧನೆಗೆ ಕ್ರಮ
ಸುಷ್ಮಾ ಸ್ವರಾಜ್, ಜಪಾನ್ ಪ್ರಧಾನಿ ಭೇಟಿ: ಸ್ನೇಹ ಸಂಬಂಧವರ್ಧನೆಗೆ ಕ್ರಮ
Published On :
ಟೋಕಿಯೊ (ಜಪಾನ್): ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿ ಮಾಡಿದ್ದಾರೆ.  ಈ ವೇಳೆ ಭಾರತ ಹಾಗೂ ಜಪಾನ್ ನಡುವಿನ ದ್ವಿಪಕ್ಷೀಯ ಸಹಕಾರ ಹೆಚ್ಚಳ, ಕುರಿತಂತೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.  
ಇನ್ನೊಂದೆಡೆ ಜಪಾನ್ ಪ್ರಧಾನ ಮಂತ್ರಿ ಎರಡೂ ರಾಷ್ಟ್ರಗಳ ನಡುವಿನ ಸಾಂಪ್ರದಾಯಿಕ ಸ್ನೇಹವವು ಹೃದಯದಿಂದ ಹೃದಯಕ್ಕೆ ಬೆಸೆದಿದೆ. ಇದಾಗಿ ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ ಎಂದು ಅವರು ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಎಎ) ವಕ್ತಾರ ರವೀಶ್ ಕುಮಾರ್ ಸುಷ್ಮಾ ಹಾಗೂ ಅಬೆ ಅವರ ಭೇಟಿಕ ಕ್ಷಣಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭಯೋತ್ಪಾದನೆ, ಆರ್ಥಿಕ ಅಭಿವೃದ್ಧಿ ಮತ್ತು ಪರಸ್ಪರ ಸಹಕಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗುರುವಾರದಂದು ಎರಡೂ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದ್ದರು. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಇಎಎಂ ಸಭೆ ನಡೆಸಲಾಗಿತ್ತು. 
ಇದಕ್ಕೂ ಮುನ್ನ ಸ್ವರಾಜ್, ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ಡಿಪಿ) ಪಾಲಿಸಿ ರಿಸರ್ಚ್ ಕೌನ್ಸಿಲ್   ಫುಮಿಯೋ ಕಿಶಿಡಾ ಅವರನ್ನು ಭೇಟಿ ಮಾಡಿದ್ದರು

ಟೋಕಿಯೊದಲ್ಲಿರುವ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ಭಾರತೀಯ ವಲಸೆಗಾರರನ್ನು ಭೇಟಿಯಾಗಿ ಮಾತನಾಡಿದ ಅವರು, ಜಪಾನ್ ಜತೆಗಿನ ಬಾಂಧವ್ಯವನ್ನು  ಬಲಪಡಿಸುವ ಮತ್ತು ಜಪಾನ್ ನಲ್ಲಿ ಭಾರತದ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ರೂಪಿಸುವಲ್ಲಿ ವಲಸಿಗರ ಕೊಡುಗೆಗಳನ್ನು ಶ್ಲಾಘಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.