ಚೀನಾದೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಭಾರತ ಹಾಗೂ ಜಪಾನ್ ಹೂಡಿಕೆಗೆ ಲಂಕಾ ಆಹ್ವಾನ
ಆರ್ಥಿಕ ನೆರವು ನೀಡುತ್ತಲೇ ತನ್ನ ಸುತ್ತಮುತ್ತಲ ದೇಶಗಳನ್ನು ತನ್ನ ಅಂಕೆಗೆ ತಕ್ಕಂತೆ ನಡೆಸುವ ಪ್ರಯತ್ನಿಸುತ್ತಿರುವ ಚೀನಾದ ಆರ್ಥಿಕ ಸಹಾಯದಿಂದ ಅಂತರ ಕಾಯ್ದುಕೊಳ್ಳಲು ಲಂಕಾ ಮುಂದಾಗಿದ್ದು,

Published On :
ಕೊಲಂಬೊ: ಆರ್ಥಿಕ ನೆರವು ನೀಡುತ್ತಲೇ ತನ್ನ ಸುತ್ತಮುತ್ತಲ ದೇಶಗಳನ್ನು ತನ್ನ ಅಂಕೆಗೆ ತಕ್ಕಂತೆ ನಡೆಸುವ ಪ್ರಯತ್ನಿಸುತ್ತಿರುವ ಚೀನಾದ ಆರ್ಥಿಕ ಸಹಾಯದಿಂದ ಅಂತರ ಕಾಯ್ದುಕೊಳ್ಳಲು ಲಂಕಾ ಮುಂದಾಗಿದ್ದು, ಭಾರತ ಹಾಗೂ ಜಪಾನ್ ನಿಂದ ಬಂಡವಾಳ ಹೂಡಿಕೆಗೆ ಆಹ್ವಾನಿಸಿದೆ.
ಮೂಲಸೌಕರ್ಯ ಯೋಜನೆಗಳಿಗೆ ಲಂಕಾ ಚೀನಾದ ಆರ್ಥಿಕ ನೆರವಿನ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬ ಟೀಕೆಗಳು ಬಂದ ಬೆನ್ನಲ್ಲೆ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಈಗ ಭಾರತ ಹಾಗೂ ಜಪಾನ್ ನಿಂದಲೂ ಆರ್ಥಿಕ ನೆರವು, ವಿದೇಶಿ ಬಂಡವಾಳ ಹೂಡಿಕೆಯನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.
ಕೊಲಂಬೋದಲ್ಲಿ ನೀಡಿರುವ ಸಂದರ್ಶನದಲ್ಲಿ ಹ್ಯಾಂಬಂಟೊಟ ಬಂದರಿನ ನಿರ್ವಹಣೆಯ ಹಕ್ಕನ್ನು ಚೀನಾಗೆ ನೀಡಿರುವುದನ್ನು ರನಿಲ್ ವಿಕ್ರಮ ಸಿಂಘೆ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಲಂಕಾದಲ್ಲಿ ಬಂಡವಾಳ ಹೂಡಲು ಭಾರತ, ಜಪಾನ್ ಹಾಗೂ ಚೀನಾ ದೇಶಗಳನ್ನು ಎದುರು ನೋಡುತ್ತಿದ್ದೇವೆ, ನಂತರದ ದಿನಗಳಲ್ಲಿ ಯುರೋಪ್ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗುವುದು ಎಂದು ವಿಕ್ರಮ ಸಿಂಘೆ ಹೇಳಿದ್ದಾರೆ.
ಶ್ರೀಲಂಕಾದಲ್ಲಿನ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾದ ಸಹಕಾರ ಹಾಗೂ ಪ್ರಾಬಲ್ಯ ಹೆಚ್ಚಾಗುತ್ತಿರುವುದು ಭಾರತದ ಹಿತದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿತ್ತು. ಈಗ ಚೀನಾದೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಭಾರತ ಹಾಗೂ ಜಪಾನ್ ನಿಂದ ಶ್ರೀಲಂಕಾ ಪ್ರಧಾನಿ ಹೂಡಿಕೆಗಾಗಿ ಆಹ್ವಾನ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


